BBKS10: ಬಿಗ್ ಮನೆಯ ಸ್ಪರ್ಧಿಗಳಿಗೆ ಗೆಟ್​ಔಟ್​ ಎಂದ ಸುದೀಪ್!

ವಿಜಯವಾಣಿ (69)
Published on

ಬೆಂಗಳೂರು: ಬಿಗ್ ಬಾಸ್​ ಕನ್ನಡ ಸೀಸನ್​ 10ರ ಸರ್ಧಿಗಳು ಇದೀಗ 11ನೇ ವಾರಾಂತ್ಯಕ್ಕೆ ಬಂದು ನಿಂತಿದ್ದು, ಶನಿವಾರ ನಡೆಯುವ ವಾರದ ಕಥೆ ಕಿಚ್ಚನ ಜತೆ ಸಂಚಿಕೆಗೆ ಸಜ್ಜಾಗಿದ್ದರು. ಆದ್ರೆ, ಈ ವೇಳೆ ಸದಸ್ಯರ ಮುಂದೆ ದಿಢೀರ್ ಹಾಜರಾದ ಸುದೀಪ್,​ ಸ್ಪರ್ಧಿಗಳು ತೋರಿದ ಬೇಜವಾಬ್ದಾರಿ ಕಂಡು ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರತಿವಾರವೂ ತಮ್ಮ ಕಿಚ್ಚನ ಪಂಚಾಯತಿ ಕಟ್ಟೆಯಲ್ಲಿ ಸಂಚಿಕೆ ಪ್ರಾರಂಭಗೊಂಡ ಕೆಲ ಸಮಯದ ಬಳಿಕ ಸ್ಪರ್ಧಿಗಳು ವಾರವಿಡೀ ಮಾಡಿರುವ ತಪ್ಪುಗಳನ್ನು ಹೇಳಿ, ಕ್ಲಾಸ್​ ತೆಗೆದುಕೊಳ್ಳುವ ಸುದೀಪ್, ಈ ಬಾರಿ ವಾರದ ಕಥೆ ಕಿಚ್ಚನ ಜತೆ ಸಂಚಿಕೆಯ ಆರಂಭದಲ್ಲೇ ಮನೆಯ ಸ್ಪರ್ಧಿಗಳ ವಿರುದ್ಧ ಗರಂ ಆಗಿದ್ದಾರೆ.

ಬಜರ್​ ಆದಾಗಲಿನಿಂದಲೂ ನೋಡುತ್ತಲೇ ಇದ್ದೀನಿ, ಯಾರಿಗೂ ಸೀರಿಯಸ್​ನೆಸ್​ ಇಲ್ಲ ಅಂತ ಅನಿಸುತ್ತಿದೆ ಎಂದು ಗರಂ ಆದ ಸುದೀಪ್, ಪ್ರತಾಪ್ ನಿಮ್ಮ ಮೈಕ್​ ಎಲ್ಲಿ? ಎಂದರು. ಮೈಕಲ್ ಹಾಗೂ ವಿನಯ್​ ಅವರಿಗೂ ಕ್ಲಾಸ್ ತೆಗೆದುಕೊಂಡ ಕಿಚ್ಚ, ಈಗಲೇ ಮುಖ್ಯದ್ವಾರ ತೆಗೆಸುತ್ತೀನಿ ಗೆಟ್ಔಟ್ ಎಂದು ಖಡಕ್ ಆಗಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net