BBKS10: ಬಿಗ್​​ ಬಾಸ್​​ ವೋಟಿಂಗ್​​​ ಫೇಕ್? ಶಾಕಿಂಗ್ ಹೇಳಿಕೆ ಕೊಟ್ಟ ಸ್ನೇಹಿತ್; ಇಲ್ಲಿದೆ ನೋಡಿ ವಿಡಿಯೋ

ವಿಜಯವಾಣಿ - 2023-12-19T142356.326
Published on

ಬೆಂಗಳೂರು: ​​​ಬಿಗ್ ಬಾಸ್​ ಕನ್ನಡ ಸೀಸನ್​ 10ರ ಸ್ಪರ್ಧಿಗಳು ಇದೀಗ 11ನೇ ವಾರಕ್ಕೆ ಕಾಲಿಟ್ಟು, 9ನೇ ವಾರಕ್ಕೆ ಬಿಗ್ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದ ಸ್ನೇಹಿತ್​, ವಿಜಯವಾಣಿ ನಡೆಸಿದ ವಿಶೇಷ ಸಂದರ್ಶನದಲ್ಲಿ ಭಾಗಿಯಾಗಿ, ತಮ್ಮ ಅನುಭವಗಳನ್ನು ವೀಕ್ಷಕರ ಮುಂದೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಬಿಗ್ ಬಾಸ್​ ಫೇಕ್​ ವೋಟಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸ್ನೇಹಿತ್, "ಮೊದಲು ಮನೆಯೊಳಗೆ ಹೋಗಿದ್ದೆ ನಾನು ಮತ್ತು ನಮ್ರತಾ. ನನಗೂ ಗೊತ್ತಿರಲಿಲ್ಲ ಇದರ ಬಗ್ಗೆ. ಬಿಗ್ ಬಾಸ್​ಗೆ ಹೋಗ್ತಿರಾ ಎಂದಾಗ ನಾವು ಕಾಸ್ಟ್ಯೂಮ್ಸ್​ ಎಲ್ಲಾ ತಗೊಂಡು ರೆಡಿ ಆಗಿದ್ವಿ, ಮೇಕಪ್ ಎಲ್ಲಾ ಮಾಡಿಕೊಂಡು ಸ್ಟೇಜ್ ಪರ್ಫಾಮೆನ್ಸ್ ಕೂಡ​ ಆಗಿತ್ತು" ಎಂದು ಹೇಳಿದರು.

"ನಾವು ವೇದಿಕೆಗೆ ಹೋದ ತಕ್ಷಣ ಹೇಳಿದ್ರು ನಿಮ್ಮ ಫಸ್ಟ್​ ಟಾಸ್ಕ್​ ಶುರು ಆಗೋದು ಇಲ್ಲೇ! ಇಲ್ಲಿ ವೋಟಿಂಗ್ ನಡೆಯುತ್ತೆ ಎಂದು ಹೇಳಿದರು. ನಾನು ಅಲ್ಲಿದ್ದವರ ಮುಂದೆ ನನಗೆ ಯಾಕೆ ವೋಟ್​ ಮಾಡಬೇಕು ಅನ್ನೋದನ್ನ ತಿಳಿಸಿದೆ. ಅದಾದ ನಂತರ ಜನಕ್ಕೆ ಇಷ್ಟ ಆಯಿತು. ನನಗೆ....." ಮತ್ತಷ್ಟು ಸಂಗತಿಗಳನ್ನು ತಿಳಿಯಲು ಕೆಳಗಿನ ಸಂದರ್ಶನದ ವಿಡಿಯೋ ನೋಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net