BBKS10: ಕಾಲಿಗೆ ಹಗ್ಗ, ಪರಸ್ಪರ ನೂಕಾಟ; ಕಣ್ಣೀರಿಟ್ಟ ಸಿರಿ!

Untitled design (88)
Published on

ಬೆಂಗಳೂರು: ಬಿಗ್​ ಮನೆಗೆ ಇಬ್ಬರು ವೈಲ್ಡ್​ಕಾರ್ಡ್​ ಎಂಟ್ರಿ ಕೊಟ್ಟಿದ್ದೇ ತಡ, ಟಾಸ್ಕ್​ಗಳು ಇದೀಗ ಮತ್ತಷ್ಟು ಬಿಗಿಗೊಂಡಿದೆ. 50 ದಿನಗಳನ್ನು ಪೂರೈಸಿದ್ದೇವೆ ಎಂದು ಕೇಕ್​ ತಿಂದು ಸಂಭ್ರಮಿಸಿದ ಸ್ಪರ್ಧಿಗಳು ಸದ್ಯ ಅಸಲಿ ಆಟಕ್ಕೆ ಈಗ ಹೆಜ್ಜೆಯಿಟ್ಟಿದ್ದಾರೆ. ಬೆಳಗ್ಗೆ ರಸಪ್ರಶ್ನೆ ಟಾಸ್ಕ್​ನಲ್ಲಿ ಭಾಗಿಯಾದವರು ಎರಡನೇ ಚಟುವಟಿಕೆಯಲ್ಲಿ ಪರಸ್ಪರ ನೋವುಂಟು ಮಾಡಿಕೊಂಡಿದ್ದಾರೆ.

ರಸಪ್ರಶ್ನೆ ಆಟವಾಡಿದ್ದ ಸ್ಫರ್ಧಿಗಳಿಗೆ ಎರಡನೇ ಟಾಸ್ಕ್‌ ಸಖತ್‌ ಚಾಲೆಂಜಿಂಗ್ ಆಗಿದೆ. ಅದರ ಪರಿಣಾಮವೂ ಜೋರಾಗಿಯೇ ಇದೆ. ಎರಡೂ ಗುಂಪಿನ ಎಲ್ಲ ಸದಸ್ಯರು ಕಾಲಿಗೆ ಹಗ್ಗವನ್ನು ಕಟ್ಟಿಕೊಳ್ಳಬೇಕು. ಎದುರಿಗೆ ನಂಬರ್ ಹಾಕಿದ ಜಾಗದಲ್ಲಿ ಒಂದಿಷ್ಟು ಬಾಲ್‌ಗಳನ್ನು ಇಡಲಾಗಿದೆ. ಬಿಗ್‌ಬಾಸ್ ಸೂಚಿಸಿದ ನಂಬರ್ ಇರುವ ಜಾಗಕ್ಕೆ ಎರಡೂ ಗುಂಪಿನ ಸದಸ್ಯರು ಜಿಗಿಯುತ್ತ ಓಡಿಹೋಗಿ ಬಾಲ್‌ ಎತ್ತಿಕೊಂಡು ಬಂದು ತಮ್ಮ ತಂಡದ ಜಾಲರಿಯಲ್ಲಿ ಹಾಕಬೇಕು. ಇದು ಟಾಸ್ಕ್​ನ ಮೂಲ ನಿಯಮ.

ಯಾವ ತಂಡದವರು ಹೆಚ್ಚು ಬಾಲ್‌ಗಳನ್ನು ಎತ್ತಿಕೊಂಡು ಬಂದು ಜಾಲರಿಯಲ್ಲಿ ಹಾಕುತ್ತಾರೋ ಅವರು ಗೆದ್ದಂತೆ. ಈ ಟಾಸ್ಕ್‌ನಲ್ಲಿ ಬಾಲ್‌ ಎತ್ತುವಾಗ ಎರಡೂ ತಂಡದ ನಡುವೆ ಭಾರೀ ಜಿದ್ದಾಜಿದ್ದಿಯಾಗಿದೆ. ಸ್ನೇಹಿತ್‌ ತಳ್ಳಿದ್ದರಿಂದ ಬಿದ್ದಿರುವ ಸಿರಿ, ‘ಇಷ್ಟೊಂದು ಫಿಸಿಕಲ್ ಆಗುವುದು ಬೇಕಾ?’ ಎಂದು ಪ್ರಶ್ನಿಸಿದ್ದಾರೆ. ಉಸ್ತುವಾರಿ ನೋಡಿಕೊಳ್ಳುತ್ತಿರುವ ಕಾರ್ತಿಕ್, ಎರಡೂ ತಂಡದ ಸದಸ್ಯರನ್ನು ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ.

ಈ ಜಿದ್ದಾಜಿದ್ದಿಯನ್ನು ಮೀರಿ ಟಾಸ್ಕ್‌ನಲ್ಲಿ ಗೆಲ್ಲುವುದು ಯಾರು? ಎಂಬ ಪ್ರಶ್ನೆಗೆ ಇಂದಿನ ಸಂಚಿಕೆಯ ಉತ್ತರ. ದಿನದ 24 ಗಂಟೆಗಳ ಲೈವ್​ ಸ್ಟ್ರೀಮಿಂಗ್​ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net