BBKS10: ಸಂಗೀತಾ ಲೆಕ್ಕಾಚಾರ ತಲೆಕೆಳಗೆ ಮಾಡಿದ ಪ್ರತಾಪ್​! ಇಲ್ಲಿಗೆ ಮುಗಿತು ಸಪೋರ್ಟ್​

ವಿಜಯವಾಣಿ - 2024-01-12T090112.142
Published on

ಬೆಂಗಳೂರು: ಬಿಗ್ ಬಾಸ್​ ಕನ್ನಡ ಸೀಸನ್​ 10ರ ಸ್ಪರ್ಧಿಗಳು ಇದೀಗ 14ನೇ ವಾರದ ಅಂತ್ಯವನ್ನು ತಲುಪಿದ್ದು, ಒಂದು ವಾರದಿಂದ ಸದಸ್ಯರ ಮಧ್ಯೆ ನಡೆಯುತ್ತಿರುವ 'ಟಿಕೆಟ್​ ಟು ಫಿನಾಲೆ' ಆಟದಲ್ಲಿ ಸದ್ಯ ಭಾರೀ ಪೈಪೋಟಿ ಎದುರಾಗುತ್ತಿದೆ. ಸ್ನೇಹ, ಪ್ರೀತಿಯ ಸಂಬಂಧಗಳನ್ನು ಬದಿಗಿಟ್ಟು ತಮ್ಮ ಆಟದ ವೈಖರಿಯನ್ನು ಪ್ರದರ್ಶಿಸುತ್ತಿರುವ ಸ್ಪರ್ಧಿಗಳ ನಡೆ ಸದ್ಯ ವೀಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದು, ಫೈನಲ್​ಗೆ ನೇರ ಪ್ರವೇಶ ಪಡೆಯುವವರಾರು ಎಂಬ ಪ್ರಶ್ನೆ ಬೆಂಬಿಡದೆ ಕಾಡುತ್ತಿದೆ.

ವಾರದ ಆರಂಭದಿಂದಲೂ ತಮ್ಮ ಆಟವನ್ನು ಆಡಲು ಇತರ ಸದಸ್ಯರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಹಾಗೂ ಆಟದಿಂದ ಹೊರಗಿಡುವ ಪ್ರಕ್ರಿಯೆ ಮನೆಯೊಳಗೆ ತೀವ್ರ ವಾದ-ವಿವಾದಗಳನ್ನು ಹುಟ್ಟುಹಾಕಿತು. ಪಾಯಿಂಟ್​ಗಳ ಅನುಸಾರ ಫಿನಾಲೆ ತಲುಪಲು ಹರಸಾಹಸ ಪಡುತ್ತಿರುವ ಸ್ಪರ್ಧಿಗಳ ಪೈಕಿ ಮುಂಚೂಣಿಯಲ್ಲಿದ್ದ ಸಂಗೀತಾ, ಇಂದು ಪ್ರತಾಪ್ ಗೆಲ್ಲದಿದ್ದರೆ, ನಾನು ಲೀಡ್​ಗೆ ಬರುತ್ತೀನಿ ಎಂಬ ಲೆಕ್ಕಾಚಾರಗಳನ್ನು ಹಾಕಿಕೊಂಡಿದ್ದರು.

ಆದ್ರೆ, ಈ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿದ ಪ್ರತಾಪ್​, ಟಾಸ್ಕ್​ನಿಂದ ಸಂಗೀತಾ ಅವರನ್ನು ಹೊರಗಿಟ್ಟಿದ್ದಾರೆ. ಇದಕ್ಕೆ ಅವರು ಕೊಟ್ಟ ಕಾರಣ ಹೀಗಿದೆ. "ಈಗ ನಾನು ಸಮಯೋಚಿತ ಬುದ್ದಿ ಉಪಯೋಗಿಸಿ ಹೊರಗಿಡಲಿಲ್ಲ ಎಂದರೆ ಇನ್ಯಾವಗಲೂ ಸಾಧ್ಯವಿಲ್ಲ ಅಂತ ನನಗೆ ಅನಿಸುತ್ತೆ" ಎಂದಿದ್ದಾರೆ. ಈ ವಿಚಾರದಿಂದ ಬೇಸರಗೊಂಡ ಸಂಗೀತಾ, ಪ್ರತಾಪ್​ನ ಮಾತನಾಡಿಸದೆ ಹೋಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net