BBKS10: ಈ ವಾರ ಕಿಚ್ಚನ ಚಪ್ಪಾಳೆ ಸಿಕ್ಕಿದ್ದು ಇವರಿಗೆ….

Untitled design (12)
Published on

ಬೆಂಗಳೂರು: ಕನ್ನಡದ ಬಿಗ್​ ಬಾಸ್​ ಸೀಸನ್​ 10 ಇದೀಗ ಐದನೇ ವಾರದ ಅಂತ್ಯವನ್ನು ತಲುಪಿದ್ದು, ಈ ವಾರ ಬಿಗ್​ ಸ್ಪರ್ಧಿಗಳ ಮಧ್ಯೆ ನಡೆದ ಭರ್ಜರಿ ಪೈಪೋಟಿಯಲ್ಲಿ ಪ್ರತಾಪ್​ ನೇತೃತ್ವದ ‘ಗಂಧದಗುಡಿ’ ತಂಡ ಜಯಶಾಲಿಯಾಗಿ ಹೊರಹೊಮ್ಮಿತು.

ಈ ವಾರ ಪೂರ ತಮ್ಮ ತಂಡದ ನಾಯಕನಾಗಿ ಪ್ರತಾಪ್​ ತೆಗೆದುಕೊಂಡ ನಿರ್ಣಯ, ಆಡಿದ ಮಾತುಗಳು, ಪ್ರಮಾಣಿಕತೆ ಎಲ್ಲವನ್ನೂ ಪರಿಗಣಿಸಿ ನಿರೂಪಕ, ನಟ ಕಿಚ್ಚ ಸುದೀಪ್​ ತಮ್ಮ ಚಪ್ಪಾಳೆಯನ್ನು ಪ್ರತಾಪ್​ಗೆ ನೀಡಿದ್ದಾರೆ.

ಈ ವಾರದ ಆರಂಭದಲ್ಲಿ ಮನೆಯ ಸದಸ್ಯರು ಆಡಿದ ಅಷ್ಟು ಟಾಸ್ಕ್​ಗಳ ಪೈಕಿ ಭಾವನೆಗಳನ್ನು ಹೊರತರುವ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಎರಡು ತಂಡಗಳು ಭಾರೀ ಕಸರತ್ತು ನಡೆಸಿತು. ಚೇರಿನಲ್ಲಿ ಕುಳಿತ ತಮ್ಮ ಎದುರಾಳಿ ತಂಡದ ಸ್ಪರ್ಧಿಯ ಮುಖದಲ್ಲಿ ಭಾವನೆ ಹೊರತೆಗೆಯುವ ಭರದಲ್ಲಿ ಆಡಿದ ಮಾತು, ವೈಯಕ್ತಿಕ ವಿಚಾರವನ್ನು ಕೆದಕಿದ ರೀತಿ ನೋಡುವ ವೀಕ್ಷಕರಿಗೆ ಒಂದು ಕ್ಷಣ ಯಾಕೆ ಇಷ್ಟು ವಿಪರೀತ? ಎಂಬ ಪ್ರಶ್ನೆ ಮೂಡಿದ್ದು ಸಹಜ!

ಈ ಎಲ್ಲಾ ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸಿದ ಸುದೀಪ್​ ಇಂದಿನ ವಾರದ ಕಥೆ ಕಿಚ್ಚನ ಜತೆ ಸಂಚಿಕೆಯಲ್ಲಿ ತಮ್ಮ ಕಿಚ್ಚನ ಚಪ್ಪಾಳೆಯನ್ನು ಗಂಧದಗುಡಿ ತಂಡ ಕ್ಯಾಪ್ಟನ್​ ಪ್ರತಾಪ್​ಗೆ ಕೊಟ್ಟಿದ್ದಾರೆ.

ಕಿಚ್ಚನ ಚಪ್ಪಾಳೆ ಪಡೆದ ಪ್ರತಾಪ್​, "ಇದು ಬಿಗ್​ ಮೊಮೆಂಟ್​ ಸರ್, ಹೊರಗಡೆಯಾದ್ರೆ ಎರಡು ಕಡೆಯಲ್ಲಿ ಏನು ತಪ್ಪಾಗುತ್ತೆ ಎಂಬುದು ಕಾಣಿಸೋದಿಲ್ಲ. ಹೌದು, ನಾನು ಕೆಲವು ತಪ್ಪು ಮಾಡಿದ್ದೇನೆ. ಅದನ್ನು ಹೇಳಿಕೊಳ್ಳುವುದಕ್ಕೆ ನನಗೆ ಯಾವುದೇ ಮುಜಗರವಿಲ್ಲ. ನನ್ನ ಕಳ್ಳ-ಸುಳ್ಳ ಅಂದ್ರು, ಹೀಯಾಳಿಸಿದರು. ಈಗ ನೆನಪಿಸಿಕೊಂಡರೆ ಮನಸ್ಸು ಬಹಳ ಹಗುರ ಅನಿಸುತ್ತದೆ ಸರ್"​ ಎಂದು ಭಾವುಕರಾಗಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net