BBKS10: ಆ ಪದ ಬಳಸಿದ್ರೆ ಆದೇಶ ಹೊರಡಿಸಿ ಈಗಲೇ ಹೊರ ಹೋಗ್ತೀನಿ!; ಕಣ್ಣೀರಿಟ್ಟ ಕಾರ್ತಿಕ್

Untitled design (35)
Published on

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್​ 10 ಇದೀಗ 10ನೇ ವಾರಕ್ಕೆ ಕಾಲಿಟ್ಟಿದ್ದು, ಮನೆಯೊಳಗೆ ಸದಸ್ಯರ ನಡುವೆ ರಾಕ್ಷಸ ಮತ್ತು ಗಂಧರ್ವರ ಗುಣ ಸ್ಪೋಟಗೊಳ್ಳುತ್ತಿದೆ. ರಾಕ್ಷಸರು ಮತ್ತು ಗಂಧರ್ವರ ನಡುವಿನ ಟಾಸ್ಕ್​ನಲ್ಲಿ ಎರಡು ತಂಡಗಳಲ್ಲಿ ಬಿರುಸಿನ ವಾಗ್ವಾದ ತಾರಕಕ್ಕೇರಿದೆ. ಒಂದೆಡೆ ಗಂಧರ್ವರಾಗಿ ತಂಡದಲ್ಲಿದ್ದ ವಿನಯ್​ ಪಾತ್ರದಿಂದ ಹೊರಬರದೆ ಆಡುತ್ತಿದ್ದರೇ, ಮತ್ತೊಂದೆಡೆ ರಾಕ್ಷಸರ ಆರ್ಭಟದಲ್ಲಿ ಕಾರ್ತಿಕ್​ ಮಿಂಚಿದ್ದಾರೆ. ಕ್ಷಣಕ್ಕೊಂದು ತಿರುವು ಪಡೆಯುತ್ತಿರುವ ಈ ಚಟುವಟಿಕೆಯಲ್ಲಿ ಕಾರ್ತಿಕ್​ ಮೇಲೆ ವಿನಯ್ ಆರೋಪವೊಂದನ್ನು ಎಸಗಿದರು.

ರಾಕ್ಷಸರಾಗಿ ಆಡುತ್ತಿದ್ದ ಕಾರ್ತಿಕ್​ ತಂಡದೊಂದಿಗೆ ಗಂಧರ್ವರಾಗಿದ್ದ ವಿನಯ್​ ಪರಸ್ಪರ ಜಟಾಪಟಿ ನಡೆಸಿದರು. ಎದುರಾಳಿಗಳ ಭಾವುಟ ಕಿತ್ತು ಹಾಕಬೇಕು ಎಂಬ ಟಾಸ್ಕ್​ನಲ್ಲಿ ಕಾರ್ತಿಕ್ ಮತ್ತು ವಿನಯ್​ ದೈಹಿಕವಾಗಿ ಜಿದ್ದಾಜಿದ್ದಿಗೆ ಇಳಿದರು. ಕೆಲ ಸಮಯ ಈ ವಿಷಯಕ್ಕೆ ಸಂಬಂಧಿಸಿದಂತೆ ಮಾತಿನ ಸಮರ ಕೂಡ ಸಾರಿದರು.

ಇದಾದ ಬಳಿಕ ಗಂಧರ್ವರಿಗೆ ನೀರು ಎರಚಿ, ಅವರನ್ನು ಕೊಟ್ಟಿರುವ ಸಮಯದೊಳಗೆ ಎಬ್ಬಿಸಬೇಕು ಎಂಬುದು ಟಾಸ್ಕ್​​ನ ನಿಯಮವಾಗಿತ್ತು. ಈ ವೇಳೆ ಪವಿ ಅವರಿಗೆ ನಿರಂತರವಾಗಿ ನೀರಿನ ದಾಳಿ ಮಾಡುವಾಗ, ಕಾರ್ತಿಕ್ ಮತ್ತು ವಿನಯ್​ ನಡುವೆ ಮಾತಿನ ಚಕಮಕಿ ಎದುರಾಯಿತು.

ಈ ವೇಳೆ ಧ್ವನಿ ಹೊರಡಿಸದೆ, ತುಟಿ ಆಡಿಸಿದ ಕಾರ್ತಿಕ್​ ವಿರುದ್ಧ ರೊಚ್ಚಿಗೆದ್ದ ವಿನಯ್​ ಕೆಟ್ಟು ಶಬ್ದಗಳ ಬಳಕೆಯಾಗಿದೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾರ್ತಿಕ್, "ನಾನು ಆ ರೀತಿಯ ಪದ ಬಳಸಿಲ್ಲ, ಮೈಮ್​ ಮಾಡಿದ್ದು, ವಿಡಿಯೋ ರಿಪೀಟ್​ ಮಾಡಿ ನೋಡಿ, ಹಾಗೇನು ಅಂದಿದ್ರೆ ಈಗಲೇ ಬಿಗ್ ಬಾಸ್​ ಆದೇಶ ಹೊರಡಿಸಲಿ, ಡೋರ್​ ಓಪನ್ ಮಾಡಲಿ ಮನೆಯಿಂದ ಹೊರ ಹೋಗ್ತೀನಿ" ಎಂದು ಹೇಳಿದ ಕಾರ್ತಿಕ್ ಇತರೆ ಸ್ಪರ್ಧಿಗಳ ಮುಂದೆ​ ಕಣ್ಣೀರಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net