BBKS10: ಸಂಗೀತಾ-ನಮ್ರತಾ ಜಡೆ ಜಗಳ; ಮನೆಯೊಳಗೆ ಏಕವಚನದ ಆರ್ಭಟ!

Untitled design - 2023-11-02T133856.850
Published on

ಬೆಂಗಳೂರು: ಬಿಗ್​ ಬಾಸ್​ ಕನ್ನಡ ಸೀಸನ್​ 10 ಇದೀಗ ದಿನದಿಂದ ದಿನಕ್ಕೆ ಹಲವು ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಮನೆಯ ಸದಸ್ಯರ ನಡುವೆ ಆಡುವ ಆಟದಲ್ಲಿ ಕಾಣಬೇಕಿದ್ದ ಪೈಪೋಟಿ ಕೇವಲ ಮಾತಿನಲ್ಲಿ ಕಾಣಿಸುತ್ತಿರುವುದು ವೀಕ್ಷಕರಿಗೆ ತೀವ್ರ ಬೇಸರ ತಂದಿದೆ.

ಬಿಗ್​ ಬಾಸ್​ ನೀಡಿದ್ದ ಹಳ್ಳಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಸ್ಪರ್ಧಿಗಳ ನಡುವೆ ಬಿರುಸಿನ ಮಾತಿನ ಚಕಮಕಿ ನಡೆದಿದ್ದು, ಸಂಗೀತಾ-ನಮ್ರತಾ ಇಬರ ಮಧ್ಯೆ ಏಕವಚನಗಳ ಜಟಾಪಟಿ ಸ್ಪೋಟಗೊಂಡಿದೆ.

ಮಡಿಕೆಯ ತಟ್ಟೆ, ಬಟ್ಟಲು ಮಾಡಬೇಕು ಎಂದು ಬಿಗ್​ ಬಾಸ್ ಟಾಸ್ಕ್​ವೊಂದನ್ನು​ ಬಿಗ್​ ಬಾಸ್ ನೀಡಿದ್ದರು. ಈ ವೇಳೆ ಎರಡು ತಂಡದ ಉಸ್ತುವಾರಿ ವಹಿಸಿದ್ದ ವಿನಯ್​ ಮತ್ತು ಸಂಗೀತಾ ನಡುವೆ ಬೂದಿ ಮುಚ್ಚಿದ ಕೆಂಡದಂತಿದ್ದ ಮನಸ್ತಾಪ ಮತ್ತೊಮ್ಮೆ ಸ್ಪೋಟಗೊಂಡಿತು. ಪರಸ್ಪರ ಒಬ್ಬರ ಮೇಲೊಬ್ಬರು ಆರೋಪ ಎಸಗಿದರು. ತದನಂತರ ಏಕವಚನದಲ್ಲಿ 'ಹೋಗೆ', 'ಹೋಗೋ' ಎಂದು ಶರುವಾದ ಜಟಾಪಟಿ, ನಮ್ರತಾ ಮತ್ತು ಸಂಗೀತಾ ನಡುವೆ ತಿರುಗಿತು.

ಈ ವೇಳೆ ಸಂಗೀತಾ ಜತೆ ವಾದಕ್ಕೆ ನಿಂತ ನಮ್ರತಾ, ಯಾರಿಗೆ ನೀನ್​ ಯಾವಳೆ ಎಂದು ಹೇಳ್ತಿಯಾ ಎಂದರು. ಸಂಗೀತಾ ಮಾತಿಗೆ ಕುಪಿತಗೊಂಡ ನಮ್ರತಾ, 'ಇದರಲ್ಲೇ ತಿಳಿಯುತ್ತೆ ನೀನು ಕಿತ್ತೋದವಳು' ಎಂದು ಹೇಳಿದರು. ಇವರಿಬ್ಬರ ಜಡೆ ಜಗಳಕ್ಕೆ ಮನೆ ಮಂದಿ ಸಂಪೂರ್ಣವಾಗಿ ತತ್ತರಿಸಿ ಹೋಗಿದ್ದರು. ಇದರೊಟ್ಟಿಗೆ ವಿನಯ್​ ಮತ್ತು ಸಂಗೀತಾ ನಡುವಿನ ಏಕವಚನದ ಮಾತಿನ ಸಮರ ಕೂಡ ತೀವ್ರವಾಯಿತು. ಕಾರ್ತಿಕ್​ ಕೂಡ ವಿನಯ್​ ಜತೆ ಕೆಲ ಸಮಯ ಏರುಧ್ವನಿಯಲ್ಲಿ ಕಿತ್ತಾಡಿದರು.

ಒಟ್ಟಾರೆ ಮನೆಯೊಳಗೆ ಬಿಗ್​ ಬಾಸ್​ ನೀಡಿದ ಟಾಸ್ಕ್​ ಮಾಡುವ ಬದಲಿಗೆ ಮಾತಿನ ಜಟಾಪಟಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಸ್ಪರ್ಧಿಗಳು, ಏಕವಚನದಲ್ಲಿ ಪದಬಳಕೆ ಮಾಡಿದ್ದಲ್ಲದೇ, ಕಾರ್ಯಕ್ರಮದ ಘನತೆಗೆ ಧಕ್ಕೆ ತರುವಂತೆ ನಡೆದುಕೊಂಡಿರುವುದು ವೀಕ್ಷಕರಲ್ಲಿ ತೀವ್ರ ಬೇಸರ ಮೂಡಿಸಿದೆ.

ದಿನದ 24 ಗಂಟೆಗಳ ಲೈವ್​ ಸ್ಟ್ರೀಮಿಂಗ್​ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net