ಬರ್ತ್​ಡೇ ದಿನವೇ ದುಬಾರಿ ಬೆಲೆಯ ಕಾರು ಖರೀದಿಸಿದ ಬಿಗ್​ಬಾಸ್​ ಖ್ಯಾತಿಯ ನಮ್ರತಾ ಗೌಡ

Namratha Gowda
Published on

ಬೆಂಗಳೂರು: ಕಳೆದ ಕೆಲ ತಿಂಗಳ ಹಿಂದಷ್ಟೇ ಮುಕ್ತಾಯಗೊಂಡ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರ ಮೂಲಕ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದ ನಟಿ ನಮ್ರತಾ ಗೌಡ ಸೆಲೆಬ್ರೇಷನ್​ ಮೂಡ್​ನಲ್ಲಿದ್ದು, ಜನುಮದಿನದಂದೇ ದುಬಾರಿ ಬೆಲೆಯ ಕಾರು ಖರೀದಿಸುವ ಮೂಲಕ ಸುದ್ದಿಯಾಗಿದ್ದಾರೆ.

ನಟಿ ನಮ್ರತಾ ಗೌಡ ಜನುಮದಿನದಂದು ತಮ್ಮ ಮನೆಗೆ ಹೊಸ ಅತಿಥಿಯನ್ನು ಬರಮಾಡಿಕೊಂಡಿದ್ದಾರೆ. MG ಮೋಟರ್ ಇಂಡಿಯಾ ಕಂಪನಿಯ ಎಲೆಕ್ಟ್ರಿಕಲ್ ಕಾರು ಖರೀದಿಸಿದ್ದಾರೆ. ಈ ಕಾರಿನ ಬೆಲೆ 6ರಿಂದ 9 ಲಕ್ಷ ರೂ.ವರೆಗೂ ಇದೆ ಎನ್ನಲಾಗಿದೆ. ಸದ್ಯ ನಮ್ರತಾ ಸಕ್ಸಸ್ ಮತ್ತು ಸಂತಸ ಕಂಡು ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿ ನಮ್ರತಾ ಗೌಡ ಅವರ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಿರುತೆರೆ, ಹಿರಿತೆರೆ ಮತ್ತು ಜಾಹೀರಾತುಗಳಿಗೆ ಅವಕಾಶಗಳು ಹರಿದು ಬರುತ್ತಿವೆ.

Namratha Gowda
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net