

BBK12: ಕನ್ನಡ ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ಕನ್ನಡ ಸೀಸನ್ 12 ಶುರುವಾಗಿ ಇಂದಿಗೆ 6 ವಾರಗಳು ಕಳೆದಿದ್ದು, ಮೊದಲ ಗ್ರ್ಯಾಂಡ್ ಫಿನಾಲೆ ಕೂಡ ಮುಗಿದುಹೋಗಿದೆ. ಎಂದಿನಂತೆ ಕಾರ್ಯಕ್ರಮವನ್ನು ನಟ, ನಿರೂಪಕ ಕಿಚ್ಚ ಸುದೀಪ್ ಅವರೇ ನಡೆಸಿಕೊಡುತ್ತಿರುವುದು ನೋಡುಗರ ಕುತೂಹಲವನ್ನು ಇದೀಗ ದುಪ್ಪಟ್ಟಾಗಿಸಿದ್ದು, ಇಂದಿನ ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ನಿರೀಕ್ಷಿಸಿದ ವಿಚಾರಗಳ ಪೈಕಿ ಒಂದು ಪ್ರಮುಖ ವಿಚಾರವನ್ನೇ ಸುದೀಪ್ ಅವರು ಪ್ರಸ್ತಾಪಿಸಿರುವುದು ನೋಡುಗರಲ್ಲಿ ಖುಷಿ ತಂದಿದೆ.
ಕಳೆದ ವಾರ ರಕ್ಷಿತಾ ಶೆಟ್ಟಿ ಮತ್ತು ಅಶ್ವಿನಿ ಗೌಡ ನಡುವೆ ನಡೆದ ವಾಗ್ವಾದದಲ್ಲಿ, ರಕ್ಷಿತಾ ನಾಟಕ ಆಡಬೇಡಿ ಎನ್ನುತ ಕಲಾವಿದರಿಗೆ ಚಪ್ಪಲಿ ತೋರಿಸಿ ಅವಮಾನ ಮಾಡಿದ್ದಾಳೆ ಎಂಬ ಅಶ್ವಿನಿ ಮಾಡಿದ ಗಂಭೀರ ಆರೋಪಕ್ಕೆ ದೃಶ್ಯದ ಮೂಲಕ ಇಂದಿನ ಪಂಚಾಯಿತಿಯಲ್ಲಿ ಪ್ರತಿಕ್ರಿಯಿಸಿರುವ ಸುದೀಪ್, ಇಲ್ಲಿ ಯಾರದ್ದು ತಪ್ಪು ಎಂಬುದನ್ನು ಸ್ಪಷ್ಟವಾಗಿ ಎತ್ತಿಹಿಡಿಯುವ ಪ್ರಯತ್ನಕ್ಕೆ ಮುಂದಾಗಿರುವುದು ಸದ್ಯ ವೀಕ್ಷಕರ ಮೆಚ್ಚುಗೆಗೆ ಕಾರಣವಾಗಿದೆ.
ಇದರ ವಿಡಿಯೋ ತುಣುಕು ಈಗ ಹೊರಬಿದ್ದಿದ್ದು, ನಿಜಕ್ಕೂ ರಕ್ಷಿತಾ ಆ ರೀತಿ ಹೇಳಿಕೆ ಅಥವಾ ಮಾಡಿದ್ರಾ ಎಂಬುದನ್ನು ಸುದೀಪ್ ಅವರು ಅಂದು ನಡೆದ ಘಟನೆಯ ಫೂಟೇಜ್ ಅನ್ನು ಮುಂದಿಟ್ಟು ಅಶ್ವಿನಿ ಅವರಿಗೆ ಪ್ರಶ್ನಿಸಿದ್ದಾರೆ. ವಿಡಿಯೋ ತೋರಿಸುವ ಮುನ್ನ ಅಶ್ವಿನಿ ಗೌಡ ನೀಡಿದ ಹೇಳಿಕೆಗೂ, ಘಟನೆಯ ವೇಳೆ ಬಂದ ಹೇಳಿಕೆಗೂ ಸಂಬಂಧವೇ ಇಲ್ಲ ಎಂಬುದು ಮೇಲ್ನೋಟಕ್ಕೆ ಸ್ಪಷ್ಟ ಎಂದು ಕಂಡುಬಂದಿದೆ. ಕಲಾವಿದರಿಗೆ ಅವಮಾನ ಮಾಡಿದ ವಿಚಾರಕ್ಕೆ ಸುದೀಪ್ ಅವರು ಪ್ರತಿಕ್ರಿಯಿಸಬೇಕು ಎಂಬುದು ನೋಡುಗರ ಅಭಿಪ್ರಾಯವಾಗಿತ್ತು. ಕಡೆಗೂ ಆ ವಿಚಾರ ಇಂದಿನ ವಾರದ ಕಥೆ ಕಿಚ್ಚನ ಜತೆ ಸಂಚಿಕೆಯಲ್ಲಿ ಪ್ರಸ್ತಾಪವಾಗಿರುವುದು ವೀಕ್ಷಕರ ಖುಷಿ, ಕುತೂಹಲಕ್ಕೆ ಕಾರಣವಾಗಿದೆ.