BBK11: ಬಿಗ್ ಬಾಸ್ ಪಟ್ಟಕ್ಕೆ 4 ವಾರಗಳಷ್ಟೇ ಬಾಕಿ! ಇವರಲ್ಲಿ ಯಾರ ಮುಡಿಗೆ ಸೀಸನ್​ 11ರ ಟ್ರೋಫಿ?

rivalary contestants
Published on

BBK11: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್​ 11ರ ಆಟದ ತೆರೆಗೆ ಉಳಿದಿರುವುದು ಕೇವಲ ನಾಲ್ಕೇ ವಾರಗಳು ಮಾತ್ರ. ಮೊದಲ ದಿನದಿಂದಲೂ ಸಾಕಷ್ಟು ಟ್ವಿಸ್ಟ್​, ಜಟಾಪಟಿ, ವಾಗ್ವಾದ, ಆರೋಪ-ಪ್ರತ್ಯಾರೋಪಗಳಿಂದಲೇ ಇಲ್ಲಿಯವರೆಗೆ ಸಾಗಿ ಬಂದಿರುವ ಸ್ಪರ್ಧಿಗಳು ಸದ್ಯ ಗೆಲುವಿನ ಹಂತ ತಲುಪಲು ಸನ್ನಿಹಿತದಲ್ಲಿದ್ದಾರೆ. ಒಟ್ಟು 20 ಬಿಗ್ ಬಾಸ್​ 11ರ ಘಟಾನುಘಟಿ ಸ್ಪರ್ಧಿಗಳ ಪೈಕಿ ಈಗ ಉಳಿದಿರುವುದು ತ್ರಿವಿಕ್ರಮ್​, ಉಗ್ರಂ ಮಂಜು, ರಜತ್, ಐಶ್ವರ್ಯ ಶಿಂಧೋಗಿ, ಭವ್ಯ, ಮೋಕ್ಷಿತಾ, ಧನರಾಜ್​, ಹನುಮಂತು ಮತ್ತು ಚೈತ್ರಾ ಕುಂದಾಪುರ.

ಮಂಜು ಮತ್ತು ತ್ರಿವಿಕ್ರಮ್

ಬಿಗ್ ಬಾಸ್​ 11 ಶುರುವಾದ ಮೊದಲ ವಾರದಿಂದಲೇ ವೀಕ್ಷಕರ ಗಮನಸೆಳೆದಿದ್ದ ಹಲವಾರು ಸ್ಪರ್ಧಿಗಳಲ್ಲಿ ಮಂಜು ಮತ್ತು ತ್ರಿವಿಕ್ರಮ್​ ಮೊದಲಿಗರು. ಮೊದಲ ದಿನದಿಂದಲೂ ಇವರಿಬ್ಬರ ನಡುವಿನ ಜಿದ್ದಾಜಿದ್ದಿ, ಪೈಪೋಟಿ ನೋಡುಗರಲ್ಲಿ ಭರವಸೆ ಮೂಡಿಸಿತ್ತು. ಮಂಜು ಮತ್ತು ತ್ರಿವಿಕ್ರಮ್ ಫಿನಾಲೆ ಸ್ಪರ್ಧಿಗಳು ಎಂದು ಊಹಿಸುವಂತೆ ಮಾಡಿತು. ಇದೆಲ್ಲದರ ಮಧ್ಯೆ 50ನೇ ದಿನಕ್ಕೆ ಮನೆಯೊಳಗೆ ವೈಲ್ಡ್​ ಕಾರ್ಡ್​ ಸ್ಪರ್ಧಿಗಳಾಗಿ ಎಂಟ್ರಿಕೊಟ್ಟ ರಜತ್, ಶೋಭಾ ಶೆಟ್ಟಿ ಮತ್ತು ಹನುಮಂತು ಪೈಕಿ ಶೋಭಾ ಶೆಟ್ಟಿ ಹೆಚ್ಚು ಸದ್ದು ಮಾಡದೆ, ಬಹಳ ಬೇಗ ಮನೆಯಿಂದ ನಿರ್ಗಮಿಸಿದರು.

50 ದಿನಗಳ ಹಿಂದಿದ್ದ ಲೆಕ್ಕಾಚಾರ

50 ದಿನಗಳ ಹಿಂದಿದ್ದ ಲೆಕ್ಕಾಚಾರ ದಿನ ಕಳೆದಂತೆ ಬದಲಾಗಿದ್ದು, ಒಬ್ಬರಿಗೊಬ್ಬರು ಟಕ್ಕರ್​ ಕೊಡುವುದರಲ್ಲಿ ನಿಸ್ಸೀಮರಾಗಿದ್ದಾರೆ. ಮಂಜು, ತ್ರಿವಿಕ್ರಮ್​, ರಜತ್ ಮತ್ತು ಹನುಮಂತು ಒಂದು ಸಾಲಿನಲ್ಲಿದ್ದರೆ, ಹುಡುಗಿಯರಲ್ಲಿ ಭವ್ಯ ಗೌಡ ಮತ್ತು ಗೌತಮಿ ಜಾದವ್​ ಸಖತ್​ ಪೈಪೋಟಿಯಲ್ಲಿದ್ದಾರೆ. ವೀಕ್ಷಕರು ಹಾಗೂ ನೆಟ್ಟಿಗರು ಜಾಲತಾಣಗಳಲ್ಲಿ ವ್ಯಕ್ತಪಡಿಸುತ್ತಿರುವ ಅಭಿಪ್ರಾಯಗಳು ಈ ಸ್ಪರ್ಧಿಗಳು ಗೆಲುವಿನ ರೇಸ್​ನಲ್ಲಿರುವ ಮುನ್ಸೂಚನೆಯನ್ನು ನೀಡಿವೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ, ಪೋಲ್​ಗಳು ಕೂಡ ನಡೆಯುತ್ತಿವೆ.

ಬಿಗ್ ಬಾಸ್​ ಸೀಸನ್​ 10ರಲ್ಲಿ ಕಾರ್ತಿಕ್​ ಮಹೇಶ್​ ವಿಜೇತರಾದರೆ, 1ನೇ ರನ್ನರ್ ಅಪ್​ ಆಗಿ ಡ್ರೋನ್ ಪ್ರತಾಪ್​ ಮತ್ತು ಎರಡನೇ ರನ್ನರ್​ ಅಪ್​ ಆಗಿ ಸಂಗೀತಾ ಶಂಗೇರಿ ಹೊರಹೊಮ್ಮಿದರು. ಆದರೆ, ಈ ಬಾರಿಯ ಸೀಸನ್​ 11ರಲ್ಲಿ ಯಾರು ಟ್ರೋಫಿಗೆ ಮುತ್ತಿಡಲಿದ್ದಾರೆ? ಯಾರು ಎರಡು ಮತ್ತು ಮೂರನೇ ರನ್ನರ್ ಅಪ್ ಆಗಿ ಹೊರಬರಲಿದ್ದಾರೆ ಎಂಬುದನ್ನು ಇನ್ನೂ ನಾಲ್ಕು ವಾರಗಳ ನಂತರ ನಡೆಯಲಿರುವ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net