BBK11: ಕೊನೆಗೆ ಮಾಡಿದ ಕೆಲಸಕ್ಕೆ ಕರ್ಮ ಹಿಡಿಯುತ್ತೆ! ಮನೆ ಮಂದಿಗೆ ತಟ್ಟಿತು ಕಿಚ್ಚನ ಮಾತಿನ ಬಿಸಿ

ವಿಜಯವಾಣಿ (1)
Published on

BBK11: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್​ 11ರ ಆಟದ ತೆರೆಗೆ ಉಳಿದಿರುವುದು ಕೇವಲ ನಾಲ್ಕೇ ವಾರಗಳು ಮಾತ್ರ. ಇನ್ನೇನು 100 ದಿನಗಳನ್ನು ಪೂರೈಸುವತ್ತ ಸಾಗುತ್ತಿರುವ ಮನೆ ಮಂದಿಗೆ ಎಷ್ಟು ಬಾರಿ ಎಚ್ಚರಿಸಿದರೂ ಕೂಡ ಅದೇ ರೀತಿಯ ಆಟ, ಕ್ಯಾಮರಾ ಕಣ್ಣಿನಿಂದ ಮರೆ ಮಾಡುವ ವರ್ತನೆಗಳು ಎಂದಿನಂತೆ ಮುಂದುವರಿದಿರುವುದು ಸದ್ಯ ಕಿಚ್ಚನ ಕೆಂಗಣ್ಣಿಗೆ ಗುರಿಯಾಗಿದೆ.

ಈ ಬಾರಿಯ 'ವಾರದ ಕಥೆ ಕಿಚ್ಚನ ಜತೆ' ಸಂಚಿಕೆಯಲ್ಲಿ ವಾರ ಪೂರ್ತಿ ನಡೆದ ಬಿಗ್ ಬಾಸ್​ ರೆಸಾರ್ಟ್​ ಟಾಸ್ಕ್​ನಲ್ಲಿ ಎರಡು ತಂಡದ ಸ್ಪರ್ಧಿಗಳು ಆಡಿದ ಆಟ, ನಡೆದುಕೊಂಡ ರೀತಿ, ಮಾತಿನ ದಾಳಿ ಮತ್ತು ಕ್ಯಾಪ್ಟನ್ಸಿ ಚಟುವಟಿಕೆಯಲ್ಲಿ ನಡೆದ ಗೋಲ್ಮಾಲ್​ ಬಗ್ಗೆ ಸುದೀಪ್​ ಧ್ವನಿ ಎತ್ತಿದ್ದಾರೆ. ಪ್ರತಿ ಬಾರಿ ತಮ್ಮ ಖಡಕ್ ಮಾತಿನಿಂದಲೇ ಬುದ್ಧಿ ಹೇಳುವ ಕಿಚ್ಚ, ಇಂದು ಕೂಡ ಪದೇ ಪದೇ ಅದೇ ತಪ್ಪುಗಳನ್ನು ಮಾಡುತ್ತಿರುವ ಸದಸ್ಯರಿಗೆ ಸರಿಯಾದ ಕ್ಲಾಸ್​ ತೆಗೆದುಕೊಂಡಿರುವುದು ಪ್ರೋಮೋದಲ್ಲಿ ಕಾಣಿಸಿದೆ.

"ರೀತಿ, ನೀತಿ ಯಾರಿಗೆ ಬೇಕು, ಗೆದ್ದರೆ ಸಾಕು ಎಂದು ಆಡಿದವರು ಕೆಲವರು. ಮೋಸದಿಂದ ಗೆದ್ದಾಗ ಖುಷಿ ಸಿಗುತ್ತೆ. ಆದ್ರೆ, ಕೊನೆಗೆ ಮಾಡಿದ ಕೆಲಸಕ್ಕೆ ಕರ್ಮ ಬಂದ ಹಿಡಿದುಕೊಳ್ಳುತ್ತೆ" ಎಂದು ಕಿಚ್ಚ ಹೇಳಿದ ಪ್ರೋಮೋ ಸದ್ಯ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಅಸಲಿಗೆ ಭವ್ಯಾ ಮಾಡಿದ ತಪ್ಪೇನು, ಗೆದ್ದ ತಂಡ ಯಾವುದು, ಸುದೀಪ್ ಒಟ್ಟಾರೆ ಹೇಳಿದ್ದೇನು? ಎಂಬುದನ್ನು ಇಂದಿನ ಕಿಚ್ಚನ ಪಂಚಾಯತಿಯಲ್ಲಿ ತಿಳಿಯಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net