

BBK11: ಇಂದು ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಕೊನೆಯ ಹಂತ ತಲುಪಿದ್ದು, ಐವರು ಸ್ಪರ್ಧಿಗಳ ಮಧ್ಯೆ ಒಬ್ಬರು ಬಿಗ್ ಬಾಸ್ ಸೀಸನ್ 11ರ ಪಟ್ಟ ಅಲಂಕರಿಸಲಿದ್ದಾರೆ. ಹೀಗಿರುವಾಗ ನಿರೂಪಕ, ನಟ ಕಿಚ್ಚ ಸುದೀಪ್ ಹೊಸ ಟ್ವಿಸ್ಟ್ವೊಂದನ್ನು ಸ್ಪರ್ಧಿಗಳ ಮುಂದೆ ಬಹಿರಂಗಪಡಿಸಿರುವುದು ಇದೀಗ ವೀಕ್ಷಕರ ಹುಬ್ಬೇರಿಸಿದೆ.
ಫಿನಾಲೆಯ ಕೊನೆಯ ಹಂತದವರೆಗೂ ಕಾದು, ಸುದೀಪ್ ಅವರ ಅಕ್ಕ-ಪಕ್ಕದಲ್ಲಿ ನಾನು ಇರಬೇಕು, ನನ್ನ ಕೈಯನ್ನು ವಿನ್ನರ್ ಎಂದು ಘೋಷಿಸಬೇಕು ಎಂಬ ಕನಸು ಕಾಣುತ್ತಿರುವ ಮೋಕ್ಷಿತಾ ಪೈ, ತ್ರಿವಿಕ್ರಮ್, ಮಂಜು, ಹನುಮಂತು ಮತ್ತು ರಜತ್ ಕಿಶನ್ಗೆ ಕಿಚ್ಚ ಸುದೀಪ್ ಬಂಪರ್ ಆಫರ್ ಮುಂದಿಟ್ಟಿದ್ದಾರೆ. ಒಂದು ಸೂಟ್ಕೇಸ್ನಲ್ಲಿ ಬರೋಬ್ಬರಿ 10ರಿಂದ 20 ಲಕ್ಷ ರೂ. ನಗದು ಬಹುಮಾನವನ್ನು ತೆಗೆದುಕೊಳ್ಳುವ ಅವಕಾಶವನ್ನು ಘೋಷಿಸಿದ್ದಾರೆ.
ಈ ಕೂಡಲೇ ಬೇಕಾದ್ರೆ ಸೂಟ್ಕೇಸ್ನಲ್ಲಿರುವ ಹಣವನ್ನು ಪಡೆದು, ಮನೆಯಿಂದ ಹೊರಬರಬಹುದು ಎಂಬ ಬಿಗ್ ಆಫರ್ ಅನ್ನು ಸುದೀಪ್ ಫಿನಾಲೆ ಸ್ಪರ್ಧಿಗಳ ಮುಂದಿಟ್ಟಿದ್ದಾರೆ. ಈ ಟ್ವಿಸ್ಟ್ ನೋಡಿ ಅಚ್ಚರಿಗೆ ಒಳಗಾದ ಸ್ಪರ್ಧಿಗಳು, ಹಣ ತಗೆದುಕೊಳ್ಳಲು ಕೆಲವು ನಿಮಿಷ ಚಿಂತಿಸಿದ್ದಾರೆ. ಅಸಲಿಗೆ ಯಾರ ಪಾಲಾಯ್ತು ಈ ನಗದು ಬಹುಮಾನದ ಸೂಟ್ಕೇಸ್? ಎಂಬುದನ್ನು ಇಂದಿನ ಗ್ರ್ಯಾಂಡ್ ಫಿನಾಲೆಯ ಕೊನೆಯ ಸಂಚಿಕೆಯನ್ನು ನೋಡಿ ತಿಳಿಯಬೇಕಿದೆ.