BBK11: 'ಬಿಗ್' ಮನೆಯಿಂದ ಶಿಶಿರ್ ಎಲಿಮಿನೇಟ್​! ಒಂದೇ ವಾರದಲ್ಲಿ ಇಬ್ಬರು ಘಟಾನುಘಟಿ ಸ್ಪರ್ಧಿಗಳು ಹೊರಗೆ

ವಿಜಯವಾಣಿ
Published on

ಬೆಂಗಳೂರು: ಕನ್ನಡದ ಬಿಗ್ ಬಾಸ್​ ಸೀಸನ್​ 11 ಈಗ 100 ದಿನಗಳತ್ತ ಸಮೀಪಿಸುತ್ತಿದ್ದು, ಈ ವಾರದ ನಾಮಿನೇಷನ್ ಬಿಸಿಯಲ್ಲಿದ್ದ ಸ್ಪರ್ಧಿಗಳ ಪೈಕಿ ಇದೀಗ ಶಿಶಿರ್​ ಹೊರಬಂದಿದ್ದಾರೆ.

ನಾಮಿನೇಷನ್​ ಹಾಟ್​ ಸೀಟಿನಲ್ಲಿ ಕುಳಿತಿದ್ದ ಧನರಾಜ್​, ರಜತ್​, ಐಶ್ವರ್ಯ ಶಿಂಧೋಗಿ, ಚೈತ್ರಾ ಕುಂದಾಪುರ, ಶಿಶಿರ್​ ಮತ್ತು ಮೋಕ್ಷಿತಾ ಪೈಕಿ ಅಂತಿಮವಾಗಿ ಶಿಶಿರ್ ಮನೆಯಿಂದ​ ಎಲಿಮಿನೇಟ್​ ಆಗಿದ್ದಾರೆ. ಈ ವಾರ ಜನರ ಮತಗಳಿಂದ ಸೇಫ್ ಆಗಿದ್ದ ಗೋಲ್ಡ್ ಸುರೇಶ್​ ಮನೆಯವರ ತುರ್ತು ಕರೆಯಿಂದ ದಿಢೀರ್​ ಮನೆಯಿಂದ ಹೊರನಡೆದಿದ್ದಾರೆ.

ಸದ್ಯ ಇಬ್ಬರು ಘಟಾನುಘಟಿ ಸ್ಪರ್ಧಿಗಳು ಇದೀಗ ಮನೆಯಿಂದ ಹೊರಬಂದಿರುವುದು ವೀಕ್ಷಕರಲ್ಲಿ ಭಾರೀ ಅಚ್ಚರಿ ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net