BBK 11: ದೊಡ್ಮನೆಗೆ ಎಂಟ್ರಿ ಕೊಟ್ರು 2 ಕೋಟಿ ರೂ. ಬೆಲೆ ಬಾಳುವ ಬಂಗಾರ ಧರಿಸಿರೋ ಗೋಲ್ಡ್‌ ಸುರೇಶ್‌

BBK
Published on

ಬೆಂಗಳೂರು: ಬಿಗ್​ಬಾಸ್​ ಸೀಸನ್​ 11ಕ್ಕೆ ( BBK 11 ) ಬಿಗ್‌ ಬಾಸ್‌ ಮನೆಗೆ ನಾಲ್ಕನೇ ಸ್ಪರ್ಧಿಯಾಗಿ ಬೆಳಗಾವಿಯ ಉದ್ಯಮಿ ಗೋಲ್ಡ್‌ ಸುರೇಶ್‌ ಎಂಟ್ರಿ ಕೊಟ್ಟಿದ್ದಾರೆ. ರಾಜಾ ರಾಣಿ ಗ್ರ್ಯಾಂಡ್​ ಫಿನಾಲೆ ವೇದಿಕೆ ಮೇಲೆ ಅಧಿಕೃತವಾಗಿ ಗೊತ್ತಾಗಿದೆ.

ಈಗಾಗಲೇ ಬಿಗ್‌ ಬಾಸ್‌ ಮನಗೆ ಸೀರಿಯಲ್‌ ತಾರೆ ಗೌತಮ್‌ ಜಾಧವ್‌, ಲಾಯರ್‌ ಕೆಎನ್‌ ಜಗದೀಶ್‌ ಹಾಗೂ ಫೈರ್‌ ಬ್ರ್ಯಾಂಡ್‌ ಭಾಷಣಗಾರ್ತಿ ಚೈತ್ರಾ ಕುಂದಾಪುರ ಎಂಟ್ರಿ ಪಡೆದುಕೊಂಡಿದ್ದಾರೆ.

ಗೋಲ್ಡ್​ ಸುರೇಶ್ ಅವರು ಉತ್ತರ ಕರ್ನಾಟಕದ ಮೂಲದವರಾಗಿದ್ದಾರೆ. ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ವೀವ್​ ಆಗಿದ್ದಾರೆ. ಪಬ್ಲಿಕ್ ಫಿಗರ್ ಆಗಿರೋ ಗೋಲ್ಡ್​ ಸುರೇಶ್ ಅವರಿಗೆ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ 15 ಸಾವಿರಕ್ಕೂ ಹೆಚ್ಚು ಪಾಲೋವರ್ಸ್ ಅನ್ನು ಹೊಂದಿದ್ದಾರೆ.

ಗೋಲ್ಡ್​ ಸುರೇಶ್ ಹುಟ್ಟಿದ್ದು ಬೆಳಗಾವಿ ಜಿಲ್ಲೆ ಅಥಣಿ ಗ್ರಾಮದಲ್ಲಿ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮೈಸೂರಿನಲ್ಲಿ ಮುಗಿಸಿದ್ದಾರೆ. ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ತಾವು ಮಾಡಿದ ಸಾಧನೆ ಬಗ್ಗೆ ಹೇಳಿಕೊಂಡಿದ್ದಾರೆ.

ಸದ್ಯ ಮೈಮೇಲೆ 2 ಕೋಟಿ ರೂ. ಬೆಲೆ ಬಾಳುವ ಬಂಗಾರವನ್ನು ಧರಿಸಿಕೊಂಡು ಬಿಗ್​ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.  ತಮ್ಮ ಮನೆಯ ನಾಯಿಗೂ ಗೋಲ್ಡ್‌ ಚೈನ್‌ ಹಾಕಿ ಸಂಭ್ರಮಿಸುವ ಗೋಲ್ಡ್‌ ಸುರೇಶ್‌. ಮುಂದಿನ ದಿನಗಳಲ್ಲಿ ಬಿಗ್​ಬಾಸ್​ ಮನೆಯಲ್ಲಿ ಯಾವ ರೀತಿ ಕಮಾಲ್​ ಮಾಡುತ್ತಾರೆ ಅಂತ ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net