ಕೆಎಸ್ ಸಿಎಂಎಸ್ ಲ್ಲಿ ಬ್ಯಾಟರಿ ಕಳ್ಳತನ

crime
Published on

ಬೆಂಗಳೂರು: ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿ ಇರುವ ರಾಜ್ಯ ಸಹಕಾರ ಮಾರಾಟ ಮಹಾಮಂಡಲ ನಿಗಮದ (ಕೆಎಸ್ ಸಿಎಂಎಸ್) ಪ್ರಧಾನ ಕಚೇರಿಯಲ್ಲಿ 2 ಬ್ಯಾಟರಿಗಳು ಕಳವಾಗಿವೆ. ನಿಗಮದ ಪ್ರಧಾನ ವ್ಯವಸ್ಥಾಪಕ ಸಿ. ಪಿಳ್ಳೆಗೌಡ, ಈ ಕುರಿತು ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯಮಟ್ಟದ ಸಹಕಾರ ಸಂಸ್ಥೆಯಾದ ಸಹಕಾರ ಮಾರಾಟ ಮಹಾಮಂಡಲ, ಕನ್ನಿಂಗ್‌ಹ್ಯಾಮ್ ರಸ್ತೆಯ 4 ಹಂತಸ್ತಿನ ಕಟ್ಟಡ ಹೊಂದಿದೆ. ಈ ಕಟ್ಟಡದಲ್ಲಿ ಪ್ರಧಾನ ಕಚೇರಿ ಹೊಂದಿದ್ದು, ಹೆಚ್ಚುವರಿ ಜಾಗವನ್ನು ಬಾಡಿಗೆಗೆ ನೀಡಲಾಗಿದೆ.

ಇದರಲ್ಲಿ 250 ಕೆವಿಎ ಸಾಮರ್ಥ್ಯದ 2 ಡೀಸೆಲ್ ಜನರೇಟರ್ ಅಳವಡಿಸಲಾಗಿತ್ತು. ಆದರೆ, ಇತ್ತೀಚೆಗೆ ಕಿಡಿಗೇಡಿಗಳು ಎರಡನ್ನು ಕಳ್ಳತನ ಮಾಡಿಕೊಂಡಿದ್ದಾರೆ. ಆರೋಪಿಗಳನ್ನು ಪತ್ತೆಹಚ್ಚಿ ಕೊಡಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net