ಆ ತಪ್ಪು ಮಾಡಬಾರದಿತ್ತು ನಾನು! ಈಗ ಬೇಸರ ಕಾಡ್ತಿದೆ: ನಟ ಬಸಿಲ್ ಜೋಸೆಫ್​ ಓಪನ್ ಟಾಕ್​ | Lokah

ವಿಜಯವಾಣಿ (45)
Published on

Lokah: ಮಾಲಿವುಡ್​ನ ಬಹುಬೇಡಿಕೆಯ ನಟರಲ್ಲಿ ಒಬ್ಬರಾಗಿರುವ ಬಸಿಲ್​ ಜೋಸೆಫ್​, ಇತ್ತೀಚೆಗಷ್ಟೇ ತೆರೆಕಂಡ ಲೋಕಃ ಸಿನಿಮಾ ಸದ್ಯ ಬಾಕ್ಸ್ ಆಫೀಸ್​ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಉತ್ತಮ ವಿಮರ್ಶೆಗಳನ್ನು ಪಡೆಯುತ್ತಿರುವ ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ನೋಡುತ್ತಿದೆ. ಮತ್ತೊಂದೆಡೆ, ಸಿನಿಮಾದಲ್ಲಿ ಬೆಂಗಳೂರು ಯುವತಿಯರನ್ನು ಕೆಟ್ಟದಾಗಿ ಬಿಂಬಿಸಿದ ಆರೋಪ ಸಿನಿಮಾದ ವಿರುದ್ಧ ಕೇಳಿಬಂದಿತ್ತು. ಅದಕ್ಕೆ ಚಿತ್ರತಂಡ ಕ್ಷಮೆ ಕೂಡ ಕೇಳಿತು. ಮತ್ತು ಆ ಡೈಲಾಗ್​ ಅನ್ನು ಚಿತ್ರದಿಂದ ಕಿತ್ತುಬಿಸಾಡಿತು. ಇದೀಗ ಚಿತ್ರದ ಬಗ್ಗೆ ಮಾತನಾಡಿರುವ ಬಸಿಲ್​, ತಾವು ಮಾಡಿದ ತಪ್ಪನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಇತ್ತೀಚಿಗಿನ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ ಬಸಿಲ್​ ಜೋಸೆಫ್​, 'ಲೋಕಃ' ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸುವಂತೆ ಚಿತ್ರದ ನಿರ್ದೇಶಕ ಡೊಮಿನಿಕ್ ಅರುಣ್ ತಮ್ಮನ್ನು ಸಂಪರ್ಕಿಸಿದ್ದಾಗಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಆ ದೊಡ್ಡ ಆಫರ್​ ಅನ್ನು ಒಪ್ಪಿಕೊಳ್ಳುವ ಬದಲಿಗೆ ನಾನು ತಿರಸ್ಕರಿಸಿದೆ. ಒಲಿದುಬಂದ ಅವಕಾಶವನ್ನು ನಿರಾಕರಿಸಿದ್ದಕ್ಕೆ ಅತೀವ ಬೇಸರ ಕಾಡುತ್ತಿದೆ ಎಂದಿದ್ದಾರೆ. ಅಸಲಿಗೆ ಇಲ್ಲಿ ಯಾವ ಪಾತ್ರಕ್ಕಾಗಿ ತಮ್ಮನ್ನು ಕೇಳಲಾಯಿತು ಎಂಬುದನ್ನು ಜೋಸೆಫ್​ ಬಹಿರಂಗಪಡಿಸಿಲ್ಲ.

ಬಾಕ್ಸ್ ಆಫೀಸ್​ನಲ್ಲಿ ಅಬ್ಬರ!

ನಟಿ ಕಲ್ಯಾಣಿ ಪ್ರಿಯದರ್ಶನ್​ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಮಲಯಾಳಂ ಸೂಪರ್ ಹೀರೋ ಚಿತ್ರ, ಸದ್ಯ ಬಾಕ್ಸ್ ಆಫೀಸ್​ನಲ್ಲಿ ಉತ್ತಮ ಓಟವನ್ನೇ ಕಂಡಿದೆ. ದುಲ್ಕರ್ ಸಲ್ಮಾನ್ ನಿರ್ಮಾಣದ ಮತ್ತು ಡೊಮಿನಿಕ್ ಅರುಣ್ ನಿರ್ದೇಶಿಸಿದ 'ಲೋಕಃ' 100 ಕೋಟಿ ರೂ. ಗಡಿದಾಟಿ ಹೋಗಿದೆ. 30 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ ಈ ಚಿತ್ರವು, 100 ಕೋಟಿ ರೂ. ಗಳಿಸಿದ ಮೂರನೇ ಅತ್ಯಂತ ವೇಗದ ಮಲಯಾಳಂ ಚಿತ್ರ ಮತ್ತು 100 ಕ್ರೋರ್​ ಕ್ಲಬ್‌ ಸೇರಿದ 12ನೇ ಸಿನಿಮಾ ಎಂಬ ಪಟ್ಟಿಗೆ ಸೇರಿದೆ.

ವಿವಾದಕ್ಕೆ ಸಿಲುಕಿದ 'ಲೋಕಃ'

ಹೌದು, ಬೆಂಗಳೂರು ಯುವತಿಯರನ್ನು ಕೆಟ್ಟದಾಗಿ ಬಿಂಬಿಸಿದ ಆರೋಪ ಈ ಚಿತ್ರದ ವಿರುದ್ಧ ಕೇಳಿಬಂದಿತು. ಬೆಂಗಳೂರು ಯುವತಿಯರನ್ನು ಕೆಟ್ಟದಾಗಿ ಬ್ರ್ಯಾಂಡ್ ಮಾಡಲಾಗಿದೆ ಎಂಬ ಟೀಕೆಗಳ ಸುರಿಮಳೆ ಜಾಲತಾಣಗಳಲ್ಲಿ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಮಲಯಾಳಂ ಚಿತ್ರದ ವಿರುದ್ಧ ಕನ್ನಡಿಗರು ತೀವ್ರ ಅಸಮಾಧಾನ ಹೊರಹಾಕಿದ್ದರು. ಕನ್ನಡಿಗರ ಆಕ್ರೋಶಕ್ಕೆ ತಲೆಬಾಗಿದ ಚಿತ್ರತಂಡ, ಕೂಡಲೇ ಆ ಡೈಲಾಗ್​ ಅನ್ನು ಚಿತ್ರದಿಂದ ಕಿತ್ತುಬಿಸಾಡಿ, ಬಹಿರಂಗವಾಗಿ ಜಾಲತಾಣದಲ್ಲಿ ಕ್ಷಮೆಯಾಚಿಸಿತು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net