

ATM PIN: ಡೆಬಿಟ್, ಕ್ರೆಡಿಟ್ ಕಾರ್ಡ್ಗಳನ್ನು ಬಳಸುವ ಬಹುತೇಕರು ಉಪಯೋಗಿಸುವ ಪಿನ್ ಸಂಖ್ಯೆಯಲ್ಲಿ ದೊಡ್ಡ ಎಡವಟ್ಟನ್ನು ಮಾಡಿಕೊಳ್ಳುತ್ತಾರೆ. ಅಂದರೆ, ತಮ್ಮ ಜನ್ಮ ದಿನಾಂಕ ಅಥವಾ ವರ್ಷಗಳ ಸಂಖ್ಯೆಯನ್ನು ಪಿನ್ ಆಗಿ ಬಳಸುತ್ತಾರೆ. ಈ ರೀತಿಯ ಒಂದಷ್ಟು ಸುಲಭವಾದ ಪಿನ್ ಅನ್ನು ನೀವೇನಾದರೂ ಇಟ್ಟುಕೊಂಡಿದ್ದರೆ, ಇಂದೇ ಬದಲಾಯಿಸಿ. ಕಾರಣ, ಇದರಿಂದ ನೀವು ಬ್ಯಾಂಕ್ ಖಾತೆಯಲ್ಲಿ ಉಳಿಸಿಟ್ಟ ಹಣ ಕ್ಷಣಮಾತ್ರದಲ್ಲಿ ಕಳ್ಳರ ಪಾಲಾಗುವ ಸಾಧ್ಯತೆಗಳು ಹೆಚ್ಚು.
ನಿಮ್ಮ ಡೆಬಿಟ್, ಕ್ರೆಡಿಟ್ ಕಾರ್ಡ್ನ ಪಿನ್ ಸಂಖ್ಯೆಯು ನಿಮಗೆ ನೆನಪಿಟ್ಟುಕೊಳ್ಳುವುದು ಕಷ್ಟ ಎಂಬಂತೆ, ಇತರರು ಅಷ್ಟು ಸುಲಭವಾಗಿ ಊಹಿಸಲು ಸಾಧ್ಯವಾಗದ ರೀತಿಯಲ್ಲಿ ಪಿನ್ ಸಂಖ್ಯೆಯನ್ನು ಇಟ್ಟುಕೊಳ್ಳಬೇಕು. ನಮ್ಮಲ್ಲಿ ಹೆಚ್ಚಿನ ಜನರು ಸಾಮಾನ್ಯವಾಗಿ ತಮ್ಮ ಎಟಿಎಂ ಕಾರ್ಡ್ ಪಿನ್ ಸಂಖ್ಯೆಗಳನ್ನು ಡಿಕೋಡ್ ಮಾಡುವಂತೆ ಹೊಂದಿಸಿರುತ್ತಾರೆ. ಈ ಕಾರ್ಡ್ಗಳ ಸುರಕ್ಷತೆಗಾಗಿ ಕೊಡಲಾದ 4 ಅಂಕಿಯ ಪಿನ್ ಸಂಖ್ಯೆ ಬಹಳ ಮುಖ್ಯ. ಅಂತಹ ಪಿನ್ ಸಂಖ್ಯೆಯ ಬಗ್ಗೆ ನೀವು ಹೆಚ್ಚು ಜಾಗರೂಕರಾಗಿರಬೇಕು.
ಬಳಕೆದಾರರು ತಮಗೆ ನೆನಪಿಡಲು ಸುಲಭವಾದ ಪಿನ್ ಸಂಖ್ಯೆಗಳನ್ನು ರಚಿಸಿಕೊಂಡಿರುತ್ತಾರೆ. ಆದರೆ, ಅದೇ ಪಿನ್ ನಂಬರ್ಗಳನ್ನು ಆನ್ಲೈನ್ ವಂಚಕರು ಕ್ಷಣಮಾತ್ರದಲ್ಲಿ ಮತ್ತು ಬಹಳ ಸುಲಭವಾಗಿ ಹ್ಯಾಕ್ ಮಾಡುವ ಚಾಲಾಕಿತನವನ್ನು ಕರಗತ ಮಾಡಿಕೊಂಡಿರುತ್ತಾರೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ನಿಪುಣರು. ಕೆಳಗೆ ತಿಳಿಸಿರುವ ಪಿನ್ ಸಂಖ್ಯೆಗಳನ್ನು ನೀವೇನಾದರೂ ಈಗಲೂ ಬಳುಸತ್ತಿದ್ದರೆ, ಇಂದೇ ಬದಲಿಸಿಕೊಳ್ಳಿ. ಇದರಿಂದ ಹ್ಯಾಕರ್ಸ್, ಆನ್ಲೈನ್ ವಂಚನೆಯಿಂದ ಸುರಕ್ಷಿತರಾಗಬಹುದು.
1. ಸಾಮಾನ್ಯ, ಆರ್ಡಿನಲ್ ಸಂಖ್ಯೆಗಳು: 1234, 1111, 2222, 3333, 0000
4321 (ಹಿಮ್ಮುಖ ಅನುಕ್ರಮ)
1212, 1122 (ಒಂದಂಕಿ ಬದಲಾವಣೆ)
2. ಜನ್ಮ ದಿನಾಂಕವೇ ಸಂಖ್ಯೆಗಳು
ಸೈಬರ್ ಭದ್ರತಾ ವರದಿಗಳ ಪ್ರಕಾರ, ಕೆಲವು ಸಂಖ್ಯೆಗಳನ್ನು ವಿಶ್ವದಲ್ಲಿ ಹೆಚ್ಚು ಬಳಸುವ ಪಿನ್ ಸಂಖ್ಯೆಗಳೆಂದು ಗುರುತಿಸಲಾಗಿದೆ. ಅಂತಹ ಪಿನ್ ಸಂಖ್ಯೆಗಳನ್ನು ಕೆಲವೇ ಸೆಕೆಂಡ್ಗಳಲ್ಲಿ ಹ್ಯಾಕ್ ಮಾಡಬಹುದಾಗಿದೆ. ಹೀಗಾಗಿ, ಅಂತಹ ನಂಬರ್ಗಳನ್ನು ನಿಮ್ಮ ಪಿನ್ ಆಗಿ ಎಂದಿಗೂ ಬಳಸಬೇಡಿ.
ಉದಾ: 1234, 0000, 2580, 1212, 6969, 9999
ಸದಾ ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಪಿನ್ ಅನ್ನು ಸ್ಟ್ರಾಂಗ್ ಆಗಿ ಹೊಂದಿಸಿ. ನಿಮ್ಮ ಜನ್ಮದಿನ, ಜನಿಸಿದ ವರ್ಷ ಅಥವಾ ಫೋನ್ ಸಂಖ್ಯೆಗಳನ್ನು ಇಟ್ಟುಕೊಳ್ಳಬೇಡಿ. ಆದಷ್ಟು ಸುಲಭವಾಗಿ ಪತ್ತೆಹಚ್ಚಬಹುದಾದ ಸಂಖ್ಯೆಯನ್ನು ತಪ್ಪಿಸಿ. ಪ್ರತಿ 6ರಿಂದ 12 ತಿಂಗಳಿಗೊಮ್ಮೆ ನಿಮ್ಮ ಪಿನ್ ಸಂಖ್ಯೆಯನ್ನು ಬದಲಾಯಿಸಿಕೊಳ್ಳುವುದು ಒಳಿತು,(ಏಜೆನ್ಸೀಸ್).