ಕಾಸರಗೋಡು ಗಣೇಶೋತ್ಸವ ಸಪ್ತತಿ ಸಂಪನ್ನ : ವಿಗ್ರಹ ವಿಸರ್ಜನಾ ಮೆರವಣಿಗೆ : ಅಯುತ ನಾಳೀಕೇರ ಮಹಾಗಣಪತಿಯಾಗ ಮಹಾಪೂರ್ಣಾಹುತಿ

New Project (2)
Published on

ಕಾಸರಗೋಡು: ಹನ್ನೊಂದು ದಿನಗಳಿಂದ ಕಾಸರಗೋಡು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನೇತೃತ್ವದಲ್ಲಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ವಠಾರದಲ್ಲಿ ನಡೆದುಬರುತ್ತಿರುವ 70ನೇ ವರ್ಷದ ಆಚರಣೆ ‘ಸಪ್ತತಿ ಮಹೋತ್ಸವ’ದ ಸಮಾರೋಪ ಶನಿವಾರ ನಡೆಯಿತು.

ಮಧ್ಯಾಹ್ನ 12ರಿಂದ ಭಕ್ತರ ಉಪಸ್ಥಿತಿಯಲ್ಲಿ ಅಯುತ ನಾಳೀಕೇರ ಮಹಾಗಣಪತಿಯಾಗದ ಮಹಾಪೂರ್ಣಾಹುತಿ ನಡೆಯಿತು. ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಕಾರ್ಯಕ್ರಮ ನೆರವೇರಿತು. ಧಾರ್ಮಿಕ ಸಭೆಯಲ್ಲಿ ಸಪ್ತತಿ ಮಹೋತ್ಸವ ಸಮಿತಿ ಅಧ್ಯಕ್ಷ ಸಿ.ವಿ.ಪೊದುವಾಳ್ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಶ್ರೀ ಮಾತಾ ಅಮೃತಾನಂದಮಯಿ ಮಠದ ಬ್ರಹ್ಮ ವೇದ ವೇದ್ಯಾಮೃತ ಚೈತನ್ಯ ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳ ವಿಜೇತರಿಗೆ ವಕೀಲ ಭರತ್‌ವೆಂಕಟೇಶ್ ಹಾಗೂ ಚಿತ್ರ ನಟ ಕಾಸರಗೋಡು ಚಿನ್ನಾ ಬಹುಮಾನ ವಿತರಿಸಿದರು. ನಂತರ ಧ್ವಜಾವರೋಹಣ, ಮಹಾಪೂಜೆ, ಶ್ರೀ ಮಹಾಗಣಪತಿಯ ವಿಗ್ರಹ ವಿಸರ್ಜನಾ ಮೆರವಣಿಗೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net