ಮೂಲ ವಿಶ್ವಾಸಗಳು

2-67f7feae2ec46
Published on
ಒಬ್ಬ ಶಾರೀರಿಕವಾಗಿ, ಮಾನಸಿಕವಾಗಿ ಗಟ್ಟಿಯುಳ್ಳ ಭಕ್ತನು ಅಂದರೆ ಸತ್ಯ ವಿಶ್ವಾಸಿಯು ದುರ್ಬಲವಾದ ವ್ಯಕ್ತಿಗಿಂತ ಅಲ್ಲಾಹನಿಗೆ ಪ್ರಿಯನಾಗಿರು ತ್ತಾನೆ. ಏಕೆಂದರೆ ಧಾರ್ವಿುಕ ಸೇವೆಯು ಅಂಥವರಿಂದಲೇ ಹೆಚ್ಚು ಆಗಲು ಸಾಧ್ಯ.

ಶಾರೀರಿಕವಾಗಿ ದುರ್ಬಲವಾಗಿರುವ, ಆರೋಗ್ಯ ಸರಿ ಇಲ್ಲದ ಮತ್ತು ಆಲೋಚನೆ ಹಾಗೂ ನಿರ್ಧಾರ ಶಕ್ತಿ ಕುಂದಿರುವ ವ್ಯಕ್ತಿಯಿಂದ ಅಂತಹಕಾರ್ಯ ಸಾಧ್ಯವಿಲ್ಲ. ಆದರೆ ಈ ಇಬ್ಬರೂ ಒಂದೇ ಸತ್ಯ ಮಾರ್ಗದ ಯಾತ್ರಿಕರಾಗಿರುವಾಗ ಪುರಸ್ಕಾರದಿಂದ ದುರ್ಬಲ ವ್ಯಕ್ತಿಯನ್ನು ವಂಚನೆಗೆ ಈಡುಮಾಡಲಾಗುವುದು.

ಇಲ್ಲಿ ಉದ್ದೇಶವು ಶಕ್ತಿಶಾಲಿ ವ್ಯಕ್ತಿಗೆ ಆದಷ್ಟು ಕಾರ್ಯನಿರ್ವಹಿಸಲು ಪ್ರೇರಣೆ ಕೊಡುವುದೇ ಆಗಿದೆ. ಸಂಕಷ್ಟಗಳೆದುರಾದಾಗ ಅಲ್ಲಾಹನಿಂದ ಸಹಾಯ ಬೇಡು. ಧೈರ್ಯಗೆಡಬೇಡ! ನಿನ್ನ ಮೇಲೆ ಏನಾದರೂ ವಿಪತ್ತೆರಗಿದರೆ ನಾನು ಇಂತಹ ಉಪಾಯ ಕೈಗೊಂಡಿದ್ದರೆ ಈ ತೊಂದರೆ ಬರುತ್ತಿರಲಿಲ್ಲ ಎನ್ನಬೇಡ. ಅದಕ್ಕೆ ಪ್ರತಿಯಾಗಿ ಅದನ್ನುಅಲ್ಲಾಹನೇ ವಿಧಿಸಿದ್ದಾನೆ ಎನ್ನಬೇಕು. ಅಲ್ಲಾಹನ ಪ್ರೀತಿಪಾತ್ರನು ತನ್ನ ಬುದ್ಧಿಶಕ್ತಿ, ಶಾರೀರಿಕ ಸಾಮರ್ಥ್ಯ ಹಾಗೂ ತನ್ನ ಕಾರ್ಯದಕ್ಷತೆಯ ಕುರಿತು ಜಂಭ ಕೊಚ್ಚಿಕೊಳ್ಳುವುದಿಲ್ಲ.

ತೊಂದರೆ ಬಂದರೂ ವಿಚಲಿತನಾಗುವುದಿಲ್ಲ. ಪ್ರತಿಯಾಗಿ ಆತನ ಮನೋಭಾವ ಹೀಗಿರುತ್ತದೆ, ಇದು ನನ್ನ ಪ್ರಭು ನಿಶ್ಚಯ ಮಾಡಿದ್ದು, ಆತನ ಈ ತೀರ್ಮಾನ ನನ್ನ ಮಟ್ಟಿಗೆ ಸರಿಯಾಗಿರಬಹುದು, ಹಿತವಾದದ್ದಾಗಿರಬಹುದು. ಅವನು ಈ ವಿಪತ್ತನ್ನು ನನ್ನ ಒಳಿತಿಗಾಗಿ, ಸಂಸ್ಕಾರಕ್ಕಾಗಿ ಕಳುಹಿಸಿರಬಹುದು. ಮೂಲಭೂತ ವಿಶ್ವಾಸಗಳಾಗಿ ಇದನ್ನು ಉಲ್ಲೇಖಿಸಬಹುದು, ಭಕ್ತನಿಗೆ ದೇವರ ಮೇಲೆ ವಿಶ್ವಾಸವಿರಬೇಕು- ಆತ ಯಾವಾಗಲೂ ಇದ್ದಾನೆಂಬ ವಿಶ್ವಾಸ. ಎರಡನೆಯದು ದೇವಚರರ ಮೇಲೆ ವಿಶ್ವಾಸವಿರಬೇಕು -ಅಂದರೆ ಅವರ ಅಸ್ತಿತ್ವವನ್ನು ಒಪ್ಪಿಕೊಳ್ಳುವುದು. ಮೂರನೆಯದು ಪ್ರವಾದಿಗಳಲ್ಲಿ ವಿಶ್ವಾಸವಿರಿಸುವುದು, ಅವರೆಲ್ಲರೂ ಸತ್ಯದ ಪ್ರತಿಪಾದಕರು ಎಂದು ನಂಬುವುದು.

ನಾಲ್ಕನೆಯದು ವಿಧಿಯ ಮೇಲೆ ವಿಶ್ವಾಸ ಇರಿಸುವುದು, ಅಂದರೆ ಎಲ್ಲವೂ ದೇವರಿಗೇ ಬಿಟ್ಟಿದ್ದು ಎಂದು ನಂಬುವುದು. ಐದನೆಯದು ಅಲ್ಲಾಹನ ಪವಿತ್ರ ಗ್ರಂಥಗಳ ಮೇಲೆ ವಿಶ್ವಾಸವಿರಿಸುವುದು ಅಂದರೆ ಅಲ್ಲಾಹನ ಗ್ರಂಥಗಳನ್ನು ಪಠಿಸುವವರು ಹಾಗೂ ಪರಲೋಕದ ಮೇಲೆ ವಿಶ್ವಾಸವಿರಿಸಿದವರು ದಾರಿ ತಪ್ಪಲಾರರು.! ಎಂದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net