

ಶಿವಮೊಗ್ಗ: ಮನುಷ್ಯತ್ವವನ್ನು ನಿೀಡಿದವರು ಬಸವಣ್ಣನವರು ಎಂದು ಸಹ್ಯಾದ್ರಿ ಕಾಲೇಜಿನ ಪ್ರಾಧ್ಯಾಪಕ ಮೋಹನ್ ಚಂದ್ರಗುತ್ತಿ ಹೇಳಿದರು.
ಎಲ್‌ಬಿಎಸ್ ನಗರದ ಆರ್ಯ ಪಿಯು ವಿಜ್ಞಾನ ಕಾಲೇಜಿನಲ್ಲಿ ಬಸವೇಶ್ವರ ಜಯಂತಿ ಉಪನ್ಯಾಸ ನೀಡಿದ ಅವರು, ಬಸವಣ್ಣ ಮಾನವೀಯತೆಯ ಪ್ರತೀಕವಾಗಿದ್ದಾರೆ. ಅಸಮನಾತೆ ತೊಲಗಿಸಿ ಸಮ ಸಮಾಜದ ಯಶಸ್ಸಿಗೆ ಶ್ರಮಿಸಿದರು. ದುಷ್ಟತನದ ವಿರುದ್ಧ ಶಾಂತಿ ಕಲಿಸಿದರು ಎಂದರು.
ಬಸವಣ್ಣನವರ ಮುಖ್ಯ ಗುರಿ ಕಾಯಕವೇ ಕೈಲಾಸವಾಗಿತ್ತು. ದುಡಿಯುವ ವರ್ಗಕ್ಕೆ ಶೋಷಣೆ ವಿರುದ್ಧ ಬಸವಣ್ಣನವರು ಮಾಡಿದ ಕೆಲಸ ಅಪಾರವಾಗಿತ್ತು. ಆಲೋಚನೆಗಳು ಶುದ್ಧವಾಗಿದ್ದಾಗ ಮಾತ್ರ ಬದುಕು ಸುಂದರವಾಗಿರುತ್ತದೆ. ಬುದ್ಧ, ಅಂಬೇಡ್ಕರ್, ಗಾಂಧೀಜಿ ಮುಂತಾದವರ ಚಿಂತನೆಗಳು ಮನುಷ್ಯನ ಬದುಕನ್ನು ರೂಪಿಸುತ್ತವೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಂಎಲ್‌ಸಿ ಮಂಜುನಾಥ್ ಭಂಡಾರಿ ಮಾತನಾಡಿ, ಜಗತ್ತಿಗೆ ಜ್ಯೋತಿ ಕೊಟ್ಟವರು ಬಸವಣ್ಣ. ಅರಿವಿನ ಬೆಳಕನ್ನು ನೀಡಿದ್ದಾರೆ. ಮಕ್ಕಳು ಹೃದಯದ ಬಾಗಿಲನ್ನು ತೆಗೆದುಕೊಂಡಿದ್ದಾರೆ. ಬಸವಣ್ಣನವರ ವಚನವಾದ ಕಳಬೇಡ ಕೊಲಬೇಡ ಎಂಬ ಒಂದು ವಚನ ಸಾಕು. ಮನುಷ್ಯ ಜೀವನದ ಸಾರ್ಥಕತೆಗೆ ಅವರ ಆದರ್ಶಗಳನ್ನು ಬೆಳೆಸಿಕೊಳ್ಳಬೇಕು ಎಂದರು. ಕಾಲೇಜಿನ ಕಾರ್ಯದರ್ಶಿ ಎನ್.ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಾಚಾರ್ಯ ನವೀನ್‌ಕುಮಾರ್ ಇದ್ದರು.