

ರಾಣೆಬೆನ್ನೂರ: ಬಸವೇಶ್ವರ ಬ್ಯಾಂಕ್‌ನ ಇಂದಿನ ಸಾಧನೆಯಲ್ಲಿ ಹಲವಾರು ಜನರ ಪರಿಶ್ರಮವಿದೆ. ಬ್ಯಾಂಕ್‌ನ ಕಷ್ಟದ ಸಮಯದಲ್ಲಿ ಮಾಜಿ ಶಾಸಕ ದಿ. ಜಿ. ಶಿವಣ್ಣ ಅದಕ್ಕೆ ಬೆನ್ನೆಲುಬಾಗಿ ನಿಂತು ಅದನ್ನು ಸರಿದಾರಿಗೆ ತರುವಲ್ಲಿ ಶ್ರಮಿಸಿದ್ದಾರೆ ಎಂದು ಮಾಜಿ ಶಾಸಕ ಅರುಣಕುಮಾರ ಪೂಜಾರ ಹೇಳಿದರು.
ನಗರದ ಎಪಿಎಂಸಿ ಸಮುದಾಯ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಸ್ಥಳೀಯ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಬ್ಯಾಂಕ್‌ನ ಶತಮಾನೋತ್ಸವದ ಸಂಭ್ರಮಾಚರಣೆಯಲ್ಲಿ ಬಸವ ಸಿರಿ ಸ್ಮರಣೆ ಸಂಚಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಇಂದು ಬಸವೇಶ್ವರ ಬ್ಯಾಂಕ್ ರಾಷ್ಟ್ರೀಯ ಬ್ಯಾಂಕ್ ಸರಿಸಮವಾಗಿ ಸೇವೆ ನೀಡುತ್ತಿರುವುದು ಹೆಮ್ಮೆಯ ಸಂಗತಿ. ಪ್ರಸ್ತುತ ಜಿಲ್ಲೆಯಲ್ಲಿಯೇ ಅತಿದೊಡ್ಡ ಸಹಕಾರ ಬ್ಯಾಂಕ್ ಎಂದು ಗುರುತಿಸಿಕೊಂಡಿದೆ ಎಂದರು.
ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ಬಸವೇಶ್ವರ ಬ್ಯಾಂಕ್ ಶೂನ್ಯ ಅನುತ್ಪಾದಕ ಸಾಲ ಹೊಂದಿರುವುದು ಇಂದಿನ ದಿನಗಳಲ್ಲಿ ಉತ್ತಮ ಸಾಧನೆಯಾಗಿದೆ. ಯಾವುದೇ ಸಹಕಾರಿ ಸಂಘ ಶತಮಾನೋತ್ಸವ ಆಚರಣೆ ಮಾಡಿಕೊಳ್ಳುತ್ತಿರುವುದು ಸಾಧನೆಯ ಮೈಲಿಗಲ್ಲಾಗಿದೆ ಎಂದರು.
ಲಿಂಗನಾಯಕನಹಳ್ಳಿ ಜಂಗಮ ಕ್ಷೇತ್ರದ ಚನ್ನವೀರ ಸ್ವಾಮೀಜಿ ಸಮಾರಂಭ ಉದ್ಘಾಟಿಸಿದರು. ಇದಕ್ಕೂ ಮುನ್ನ ಬ್ಯಾಂಕ್‌ನ ಕಟ್ಟಡಕ್ಕೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶತಮಾನೋತ್ಸವದ ಶಿಲಾನ್ಯಾಸ ನೆರವೇರಿಸಿದರು. ಬ್ಯಾಂಕ್‌ನ ಅಧ್ಯಕ್ಷ ಚನ್ನವೀರಪ್ಪ ಅಸುಂಡಿ ಅಧ್ಯಕ್ಷತೆ ವಹಿಸಿದ್ದರು.
ಪ್ರಮುಖರಾದ ವಿ.ಪಿ. ಲಿಂಗನಗೌಡ್ರ, ವಕೀಲ ಕೆ. ಶಿವಲಿಂಗಪ್ಪ, ಎಸ್.ಎಸ್. ರಾಮಲಿಂಗಣ್ಣನವರ, ಸುನಂದ ತಿಳವಳ್ಳಿ, ಸುರೇಶಗೌಡ ಪಾಟೀಲ, ವಿಕ್ರಮ ಕುಲಕರ್ಣಿ, ಬ್ಯಾಂಕ್‌ನ ನಿರ್ದೇಶಕರಾದ ಪರಮೇಶಪ್ಪ ಗವಳಿ, ಮಂಜುನಾಥ ಓಲೇಕಾರ, ಈಶ್ವರ ಹಾವನೂರ, ಬಸವರಾಜ ತಾವರಗೊಂದಿ, ಚೋಳಪ್ಪ ಕಸವಾಳ, ಶಿವಾನಂದ ಸಾಲಗೇರಿ, ರಾಜಣ್ಣ ಮೋಟಗಿ, ಶಂಭುಲಿಂಗಪ್ಪ ಕಟಗಿಹಳ್ಳಿ, ಸರೋಜಾ ಅಜ್ಜೇವಡಿಮಠ, ಸುಮಾ ತಿಳವಳ್ಳಿ, ಬಸವಣ್ಣೆಪ್ಪ ಬಳ್ಳಾರಿ, ರಮೇಶ ಪಟ್ಟಣಶೆಟ್ಟಿ, ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಿರಂಜನ ಉದಾಸಿ ಹಾಗೂ ಸಿಬ್ಬಂದಿ ವರ್ಗ, ಪಿಗ್ಮಿ ಸಂಗ್ರಹಕಾರರು ಉಪಸ್ಥಿತರಿದ್ದರು.