ಮುಖ್ಯಮಂತ್ರಿಗೂ ಕೋವಿಡ್ ಪಾಸಿಟಿವ್; ಎರಡನೇ ಸಲ ಸೋಂಕಿಗೆ ಒಳಗಾದ ಬಸವರಾಜ ಬೊಮ್ಮಾಯಿ

Bommai
Published on

ಬೆಂಗಳೂರು: ಸಚಿವರಾದ ಬಿ.ಸಿ. ನಾಗೇಶ್​, ಆರ್​.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಕಟೀಲ್, ಸಂಸದ ಪಿ.ಸಿ. ಗದ್ದಿಗೌಡರ್​ ಮುಂತಾದವರು ಕೋವಿಡ್ ಸೋಂಕಿಗೆ ಒಳಗಾದ ಬೆನ್ನಿಗೇ ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲೂ ಕೋವಿಡ್ ಸೋಂಕು ದೃಢಪಟ್ಟಿದೆ. ಈ ಮೂಲಕ ಅವರು ಎರಡನೇ ಸಲ ಕೋವಿಡ್ ಸೋಂಕಿಗೆ ಒಳಗಾದಂತಾಗಿದೆ.

ತಾವು ಸೋಂಕಿತರಾದ್ದನ್ನು ಸಿಎಂ ಸ್ವತಃ ಹೇಳಿಕೊಂಡಿದ್ದು, ಲಘು ಕೋವಿಡ್ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ತಪಾಸಣೆ ಮಾಡಿಕೊಂಡಾಗ ಸೋಂಕಿರುವುದು ದೃಢಪಟ್ಟಿದೆ ಎಂಬುದನ್ನು ಅವರು ತಿಳಿಸಿದ್ದಾರೆ. ಸದ್ಯ ಹೋಮ್​ ಕ್ವಾರಂಟೈನ್​ನಲ್ಲಿರುವ ಅವರು ವೈದ್ಯರ ಸಲಹೆ ಮೇರೆಗೆ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೋವಿಡ್​ ಸೋಂಕಿನ ಹಿನ್ನೆಲೆಯಲ್ಲಿ ಸಿಎಂ ಅವರ ನಾಳೆಯ ಸಿಟಿ ರೌಂಡ್ಸ್​ ಕಾರ್ಯಕ್ರಮ ರದ್ದುಗೊಳಿಸಲಾಗಿದೆ. ಒಟ್ಟು ಮೂರು ದಿನದ ಸಿಟಿ ರೌಂಡ್ಸ್ ಹಮ್ಮಿಕೊಳ್ಳಲಾಗಿದ್ದು, ಅದನ್ನು ಮುಂದೂಡಲಾಗಿದೆ. ಈ ಹಿಂದೆ ಗೃಹಸಚಿವರಾಗಿದ್ದಾಗಲೂ ಅವರು ಕೋವಿಡ್ ಸೋಂಕಿಗೆ ಒಳಗಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net