ಅಧಿವೇಶನದಲ್ಲಿ ಧ್ವನಿ ಎತ್ತಲು ಮನವಿ

BBGD-30-2
Published on

ಬಸವನಬಾಗೇವಾಡಿ: ರೈತರ ಜಮೀನುಗಳಿಗೆ ತೆರಳುವ ದಾರಿ ಸಮಸ್ಯೆ ಕುರಿತು ಮುಂಬರುವ ಅಧಿವೇಶನದಲ್ಲಿ ಚರ್ಚಿಸಿ ಸಮಸ್ಯೆ ಬಗೆ ಹರಿಸಲು ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಆಗ್ರಹಿಸಿ ರೈತ ಸಂಘದ ವತಿಯಿಂದ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಅವರಿಗೆ ಮನವಿ ಮಾಡಲಾಯಿತು.

ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿ ವಚನಶಿಲಾ ಮಂಟಪ ವೀಕ್ಷಿಸಿದ ಬಳಿಕ ಎಸ್.ಆರ್. ಪಾಟೀಲ ಅವರನ್ನು ರೈತ ಮುಖಂಡರು ಭೇಟಿ ಮಾಡಿ ಮನವಿ ಮಾಡಿದರು.

ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ರೈತರು ಜಮೀನುಗಳಿಗೆ ಸಂಚರಿಸುವ ದಾರಿ ಸಮಸ್ಯೆಯಿಂದ ರೈತರು ಪರದಾಡುವಂತಾಗಿದೆ. ಆದ್ದರಿಂದ ತಾವು ಸೆ.13 ರಂದು ಪ್ರಾರಂಭವಾಗಲಿರುವ ಅಧಿವೇಶನದಲ್ಲಿ ರೈತರ ಜಮೀನುಗಳಿಗೆ ಹೋಗುವ ದಾರಿ ಸಮಸ್ಯೆ ಬಗ್ಗೆ ಚರ್ಚಿಸಿ ಕಾನೂನು ತಿದ್ದುಪಡಿಗೊಳಿಸಿ ಸ್ಥಳೀಯ ತಹಸೀಲ್ದಾರರಿಗೆ ಅಧಿಕಾರ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸುವಂತೆ ಮನವಿ ಮಾಡಿದರು.

ಇದಕ್ಕೆ ಸಂದಿಸಿದ ವಿರೋಧ ಪಕ್ಷದ ನಾಯಕ ಪಾಟೀಲ, ಈ ವಿಷಯ ಕುರಿತು ಅಧಿವೇಶನದಲ್ಲಿ ಧ್ವನಿ ಎತ್ತುವುದಾಗಿ ಭರವಸೆ ನೀಡಿದರು.

ಈರಣ್ಣ ಸಜ್ಜನ, ಶ್ರೀಶೈಲ ಚಾಂದಕೋಟೆ, ಅಪ್ಪು ಪತಂಗಿ, ರೇವಣಸಿದ್ದ ದಳವಾಯಿ, ಮುರುಗೇಶ ಹದಿಮೂರ, ಸಿದ್ದು ಉಕ್ಕಲಿ, ಶಿವಾನಂದ ನಡಕಟ್ಟಿ, ಶರಣು ಬಾಗೇವಾಡಿ, ಮಾಲಿಂಗ ಅವಟಿ, ಕಾಶೀನಾಥ ಅವಟಿ, ಕೈಲಾಸ ಬಾಗೇವಾಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net