25 ಸಾವಿರ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಬಸವಕಲ್ಯಾಣ ಲೇಡಿ ಪಿಎಸ್​ಐ, ಪೇದೆ!

PSI Sheela Nyaman and Constable Parasuramareddy
ಪಿಎಸ್​ಐ ಶೀಲಾ ನ್ಯಾಮನ್​ ಮತ್ತು ಪೇದೆ ಪರಶುರಾಮರೆಡ್ಡಿ
Published on

ಬೀದರ್: ಠಾಣಾ ವ್ಯಾಪ್ತಿಯಲ್ಲಿ ಮರಳು ಸಾಗಾಣಿಕೆಗೆ ಲಾರಿಗಳಿಗೆ ಅನುಮತಿ ನೀಡಲು 25 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​​ರನ್ನು ಲೋಕಾಯುಕ್ತ ಪೊಲೀಸರು ರೆಡ್​ಹ್ಯಾಂಡ್​ ಆಗಿ ಬಲೆಗೆ ಕೆಡವಿದ್ದಾರೆ.

ಬಸವಕಲ್ಯಾಣ ತಾಲೂಕಿನ ಮಂಠಾಳ ಠಾಣೆಯ ಪಿಎಸ್ಐ ಶೀಲಾ ನ್ಯಾಮನ್ ಹಾಗು ಕಾನ್​ಸ್ಟೆಬಲ್ ಪರಶುರಾಮರೆಡ್ಡಿ ಲೋಕಾಯುಕ್ತ ಬಲೆಗೆ ಬಿದ್ದವರು. ಠಾಣಾ ವ್ಯಾಪ್ತಿಯಲ್ಲಿ ಮರಳು ಸಾಗಾಣಿಕೆ ಲಾರಿಗಳಿಗೆ ಅನುಮತಿ ನೀಡಲು ದೂರುದಾರ ಇರ್ಷಾದ್​ ಪಟೇಲ್‌ನಿಂದ 21 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಸಾಗಾಣಿಕೆಗೆ ಅನುಮತಿ‌ ಪಡೆದಿದ್ದ ಇರ್ಷಾದ್​ ಮೂರು ಲಾರಿ ಮುಖಾಂತರ ಮರಳು ಸಾಗಾಣಿಕೆ ನಡೆಸುತ್ತಿದ್ದ. ಪ್ರತಿ ಲಾರಿಗೆ ಪ್ರತಿ ತಿಂಗಳು 7 ಸಾವಿರ ರೂ. ನೀಡುವಂತೆ ಪೊಲೀಸರು ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಮರಳು ಲಾರಿಯ ಮಾಲೀಕ ಇರ್ಷಾದ ಪಟೇಲ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ದೂರಿನ ಅನ್ವಯ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಲಂಚ ಸ್ವೀಕರಿಸುವಾಗಲೇ ದಾಳಿ ಮಾಡಿ, ಪಿಎಸ್​ಐ ಮತ್ತು ಕಾನ್​ಸ್ಟೆಬಲ್​ನನ್ನು ಬಂಧಿಸಿದ್ದಾರೆ. ಇಬ್ಬರ ವಿರುದ್ಧವು ಪ್ರಕರಣವನ್ನು ದಾಖಲಿಸಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net