

ಬೆಂಗಳೂರು: 2-ಎ ಮೀಸಲಾತಿಗಾಗಿ ಆಗ್ರಹಿಸಿ ಪಂಚಮಸಾಲಿ ಸಮಾಜವು ಕಳೆದ 2 ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದೆ. ಇನ್ನು ಹೋರಾಟ ತಾರ್ಕಿಕ ಅಂತ್ಯ ಕಾಣುವುದರಲ್ಲಿದೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಬೇಸರ ಹೊರಹಾಕಿದರು.
ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಬಸವಮೃತ್ಯುಂಜಯ ಸ್ವಾಮೀಜಿ, ಈ ಮೊದಲು ನಮ್ಮ ಸಮುದಾಯಕ್ಕೆ 5% ಮೀಸಲಾತಿ ಇತ್ತು. ಹೀಗಾಗಿ ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿಗಾಗಿ ಆಗ್ರಹಿಸಿ ಕಳೆದ 2 ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. ಮೀಸಲಾತಿಗಾಗಿ ಆಗ್ರಹಿಸಿ ನಮ್ಮ ಜನರು ಬೀದಿಗಿಳಿದು ಹೋರಾಟ ಮಾಡಿದರು. ಐತಿಹಾಸಿಕ ಪಾದಯಾತ್ರೆ ಮಾಡಿದ್ದೇವೆ. ಫ್ರೀಡಂಪಾರ್ಕ್ನಲ್ಲಿ ಪ್ರತಿಭಟನೆ ನಡೆಸಿದ್ದೇವೆ. ಮೀಸಲಾತಿ ಕುರಿತು ನಿನ್ನೆ ಕೋರ್ಟ್ ತಡೆಯಾಜ್ಞೆ ತೆರವು ಮಾಡಿದೆ. ಸಚಿವ ಸಂಪುಟ ಸಭೆಯ ಬಳಿಕ ಸಿಎಂ ಬೊಮ್ಮಾಯಿ ನೀಡಿದ ಹೇಳಿಕೆಯನ್ನು ಗಮನಿಸಿದೆವು. ನಾವು 2A ಮೀಸಲಾತಿ ನೀಡುವಂತೆ ಕೇಳಿದ್ವಿ. ಆದರೆ, ಪಂಚಮಸಾಲಿ ಸಮುದಾಯವನ್ನು 2Aಗೆ ಸೇರಿಸೋಕೆ ಆಗಲ್ಲ ಬದಲಿಗೆ ಅದೇ ಸೌಲಭ್ಯ ಕೊಡಬಲ್ಲ 2D ಅಡಿಯಲ್ಲಿ 7% ಮೀಸಲಾತಿ ಕೊಟ್ಟಿದ್ದಾರೆ.
ಆದರೆ, ನಾವು 2A ಆಡಿಯಲ್ಲಿ 15% ಮೀಸಲಾತಿಗಾಗಿ ಆಗ್ರಹಿಸಿದ್ವಿ. ಆದರೆ, ಸರ್ಕಾರ 7% ಎಂದು ಹೇಳುತ್ತಿದೆ. ಸರ್ಕಾರದ ನಿರ್ಧಾರವನ್ನು ಗಮನಿಸಿ ನಾವು ನಮ್ಮ ನಿರ್ಣಯವನ್ನು ಮಂಡಿಸುತ್ತೇವೆ ಎಂದು ಹೇಳಿದ್ದಾರೆ.
ಶನಿವಾರ ಈ ಬಗ್ಗೆ ಚರ್ಚೆ ಮಾಡಿ ಲೀಗಲ್ ಟೀಂಗೆ ಕಳುಹಿಸುತ್ತೇವೆ. ಅವರ ಸಲಹೆ ಮೇರೆಗೆ ಹೋರಾಟ ಮುಂದುವರೆಸಬೇಕಾ? ಅಥವಾ ಬೇಡವಾ? ಎಂದು ನಾಳೆ ಕಾರ್ಯಾಕಾರಿಣಿ ಸಭೆ ಬಳಿಕ ತಿಳಿಸುತ್ತೇವೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.