30ಕ್ಕೆ ಬಸವ ಜಯಂತಿ

basava meeting
ಕೋಲಾರದ ಕನ್ನಡ ಮತ್ತು ಸಂಸತಿ ಇಲಾಖೆ ಕಚೇರಿಯಲ್ಲಿ ಗುರುವಾರ ಬಸವ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಇಲಾಖೆ ಸಹಾಯಕ ನಿರ್ದೇಶಕಿ ವಿಜಯಲಕ್ಷಿ$್ಮ, ಉಪವಿಭಾಗಾಧಿಕಾರಿ ಕಚೇರಿಯ ತಹಸೀಲ್ದಾರ್​ ಮಂಜುನಾಥ್​, ಉಪತಹಸೀಲ್ದಾರ್​ ಹಂಸ ಮೇರಿಯಾ, ಜ್ಞಾನಮೂರ್ತಿ ಇದ್ದರು.
Published on

ಕೋಲಾರ: ಸಮಾನತೆಯ ಹರಿಕಾರ, ಸಾಂಸತಿಕ ನಾಯಕ ಶ್ರೀಬಸವೇಶ್ವರ ಜಯಂತಿಯನ್ನು ಏ.30ರಂದು ಆಚರಿಸಲು ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕಿ ವಿಜಯಲಕ್ಷಿ$್ಮ ಹೇಳಿದರು.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಬಸವ ಜಯಂತಿ ಕಾರ್ಯಕ್ರಮ ಕುರಿತು ಗುರುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸತಿ ಇಲಾಖೆ ಹಾಗೂ ವೀರಶೈವ ಲಿಂಗಾಯತ ವಿವಿಧ ಸಂಘಟನೆಗಳ ಸಂಯುಕ್ತಾಶ್ರದಲ್ಲಿ ಆಚರಿಸಲು ತೀಮಾರ್ನಿಸಲಾಗಿದೆ ಎಂದರು.

ನಗರದ ಎಸ್​ಎನ್​ಆರ್​ ಆಸ್ಪತ್ರೆಯ ವೃತ್ತದಲ್ಲಿ ಬೆಳಗ್ಗೆ 10 ಗಂಟೆಗೆ ಬಸವೇಶ್ವರರ ಭಾವಚಿತ್ರವುಳ್ಳ ಪಲ್ಲಕ್ಕಿಗಳ ಮೆರವಣಿಗೆಗೆ ಚಾಲನೆ, ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿ ರಂಗಮಂದಿರ ತಲುಪಲಿದೆ. ಮಧ್ಯಾಹ್ನ 1 ಗಂಟೆಗೆ ವೇದಿಕೆ ಕಾರ್ಯಕ್ರಮ ನಿಗದಿಪಡಿಸಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶರಣೆಯರ ಬಳಗದಿಂದ ಬಸವಣ್ಣನವರ ವಚನ ಗಾಯನ, ಕಲಾವಿದರಿಂದ ನಾಡಗೀತೆಗಳು, ರಾಜ್ಯೋತ್ಸವ ಪ್ರಶಸ್ತಿ ಪುರಸತ ಎನ್​.ಆರ್​.ಜ್ಞಾನಮೂರ್ತಿ ಅವರಿಂದ ಉಪನ್ಯಾಸ ನಡೆಯಲಿದೆ ಎಂದು ತಿಳಿಸಿದರು.

ಅಖಿಲ ಭಾರತ ಸಾಹಿತ್ಯ ಪರಿಷತ್​ ಕಾರ್ಯದರ್ಶಿ ಬಿ.ಸುರೇಶ್​ ಮಾತನಾಡಿ, ಸಾಮಾಜಿಕ ನಾಯಕ ಬಸವೇಶ್ವರರ ಜಯಂತಿಯನ್ನು ಸರ್ಕಾರದ ಸೂಚನೆಯಂತೆ ಎಲ್ಲ ಕಚೇರಿಗಳು, ಗ್ರಾಪಂಗಳಲ್ಲಿ ಆಚರಿಸಬೇಕು, ಶಾಲಾ&-ಕಾಲೇಜುಗಳಲ್ಲಿ ಬಸವೇಶ್ವರರ ಕುರಿತು ವಚನ ಹಾಗೂ ಆಶು&ಭಾಷಣಗಳ ಕುರಿತು ಸ್ಪರ್ಧೆ ಏರ್ಪಡಿಸುವ ಮೂಲಕ ಬಸವೇಶ್ವರರ ವಿಚಾರಧಾರೆಗಳ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಸಿದ್ದಲಿಂಗ ಒಡೆಯರ್​, ಬಸವೇಶ್ವರ ಭಕ್ತ ಮಂಡಳಿಯ ಎನ್​.ಆರ್​.ಪ್ರಭಾಕರ್​, ಶರಣೆಯರ ಬಳಗದ ವಿಮಲಾ ಬೈಲಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net