

ರಾಣೆಬೆನ್ನೂರ: ತಾಲೂಕಿನ ಚಳಗೇರಿ ಗ್ರಾಮದಲ್ಲಿ ಶುಕ್ರವಾರ ಬಸವ ಜಯಂತಿ ನಿಮಿತ್ತ ಶ್ರೀ ಬಸವೇಶ್ವರ ಭಾವಚಿತ್ರ ಹಾಗೂ ಎತ್ತುಗಳ ಮೆರವಣಿಗೆ ಮಾಡಲಾಯಿತು.
ಪ್ರಮುಖರಾದ ಮಂಜುನಾಥ ಗೌಡಪ್ಪಗೌಡ್ರ, ರಾಜು ಪಾಟೀಲ, ಶಿದ್ಲಿಂಗಪ್ಪ ಮರಿನಾಗಮ್ಮನವರ, ಭರಮಗೌಡ ಕರೂರ, ಶಿವಕುಮಾರ ತಿಪ್ಪಾಯಿಕೊಪ್ಪ, ಮಲ್ಲಿಕಾರ್ಜುನ ಭಂಗೀಗೌಡ್ರ, ಸಿದ್ದು ತೋಟದ, ಅಣ್ಣಪ್ಪ ತೆಗ್ಗಿನ ಮತ್ತಿತರರು ಪಾಲ್ಗೊಂಡಿದ್ದರು.