8ರಂದು ಪಾಲಿಬೆಟ್ಟದಲ್ಲಿ ಬರಿಗಾಲು ಮ್ಯಾರಥಾನ್

9 DBP 2 Myarathan
Published on

ಸಿದ್ದಾಪುರ : ಕೂರ್ಗ್ ವೆಲ್‌ನೆಸ್ ಫೌಂಡೇಷನ್ ವತಿಯಿಂದ ಡಿ.8ರಂದು ಟಾಟಾ ಕಾಫಿ ಸಂಸ್ಥೆಯ ಮೈದಾನದಲ್ಲಿ 8ನೇ ಆವೃತ್ತಿಯ ಬರಿಗಾಲು ಮ್ಯಾರಥಾನ್ ಸ್ಪರ್ಧೆ ನಡೆಯಲಿದೆ. ಬಾಲಿವುಡ್ ನಟ ಮಿಲಿಂದ್ ಸೋಮನ್ ಮ್ಯಾರಥಾನ್‌ಗೆ ಚಾಲನೆ ನೀಡಲಿದ್ದಾರೆ.

ಸುಮಾರು 300 ರಿಂದ 500 ಸ್ಪರ್ಧಿಗಳು ಮ್ಯಾರಥಾನ್‌ನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ರಾಜ್ಯದ ಸ್ಪರ್ಧಿಗಳನ್ನು ಹೊರತುಪಡಿಸಿ ಅಮೆರಿಕ, ಸಿಂಗಾಪುರ, ಕೇರಳ, ತಮಿಳುನಾಡು, ದೆಹಲಿ, ಮುಂಬೈ ಹಾಗೂ ಕೋಲ್ಕತ ಸೇರಿದಂತೆ ವಿದೇಶಿಗರು ಕೂಡ ಭಾಗವಹಿಸಲಿದ್ದಾರೆ.

42ಕಿ.ಮೀ., 21ಕಿ.ಮೀ., 10 ಕಿ.ಮೀ., 5 ಕಿ.ಮೀ. ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. 42 ಕಿ.ಮೀ. ಓಟದಲ್ಲಿ ಮೊದಲ ಬಹುಮಾನ 15 ಸಾವಿರ ರೂ., ಎರಡನೇ ಬಹುಮಾನ 8,000 ರೂ., 21 ಕಿ.ಮೀ. ಓಟದಲ್ಲಿ ಕ್ರಮವಾಗಿ 10 ಸಾವಿರ, 5 ಸಾವಿರ ರೂ., 10 ಕಿ.ಮೀ. ಓಟದಲ್ಲಿ 7 ಸಾವಿರ ರೂ., 3 ಸಾವಿರ ರೂ., 5 ಕಿ.ಮೀ. ಓಟದಲ್ಲಿ ಪಾಲ್ಗೊಂಡು ವಿಜೇತರಾದವರಿಗೆ ಸ್ಮರಣಿಕೆ ನೀಡಲಾಗುತ್ತದೆ.

ಕೊಡಗನ್ನು ಪ್ಲಾಸ್ಟಿಕ್ ಮುಕ್ತ ಮಾಡುವುದು, ಕ್ಲೀನ್ ಕೊಡಗು ಮತ್ತು ಕೊಡಗಿನ ನೈಸರ್ಗಿಕ ಸಂಪತ್ತು ಉಳಿಸಿಕೊಳ್ಳಲು ಕೊಡಗನ್ನು ಶೂನ್ಯ ತ್ಯಾಜ್ಯ ಮಾಡುವ ಸಲುವಾಗಿ ಜನರಲ್ಲಿ ಜಾಗೃತಿ ಮೂಡಿಸಲು ಮ್ಯಾರಥಾನ್ ಆಯೋಜಿಸಿಕೊಂಡು ಬರುತ್ತಿದ್ದೇವೆ ಎಂದು ಕೂರ್ಗ್ ವೆಲ್‌ನೆಸ್ ಫೌಂಡೇಷನ್‌ನ ಸ್ಥಾಪಕ ಅಧ್ಯಕ್ಷ ಚೆಪ್ಪುಡಿರ ನಿಕ್ಕಿ ಪೊನ್ನಪ್ಪ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net