VIDEO | ಮುಖಕ್ಕೆ ಎಂಜಲು ಉಗಿದು ಮಸಾಜ್ ಮಾಡಿದ ಕ್ಷೌರಿಕ ಅಮ್ಜದ್ ಅರೆಸ್ಟ್​

viral video
Published on

ಉತ್ತರಪ್ರದೇಶ: ಇಲ್ಲೊಬ್ಬ ಯುವಕ ಕ್ಷೌರದಂಗಡಿಯಲ್ಲಿ ಫೇಸ್ ಮಸಾಜ್ ಮಾಡಿಕೊಂಡಿದ್ದಾನೆ. ಕ್ಷೌರಿಕ ಎಂಜಲು ಉಗಿದು ಫೇಸ್ ಮಸಾಜ್ ಮಾಡಿದ್ದಾನೆ. ಈ ಕುರಿತ ವಿಡಿಯೋ ತುಣುಕೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಘಟನೆ ಉತ್ತರ ಪ್ರದೇಶದ ಶಾಮ್ಲಿ ಎಂಬಲ್ಲಿ ನಡೆದಿದೆ.

ಸೆಲೂನ್ ಒಂದರ ಕ್ಷೌರಿಕ ಅಮ್ಜದ್ ಎಂಜಲು ಉಗುಳಿ ತನ್ನ ಗ್ರಾಹಕರಿಗೆ ಫೇಸ್ ಮಸಾಜ್ ಮಾಡಿದ್ದಾನೆ. @TruestoryUP ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈತನ ಕೃತ್ಯದ ವಿಡಿಯೋ ತುಣುಕು ವೈರಲ್ ಆಗುತ್ತಿದ್ದಂತೆ ಈತನ ಕೃತ್ಯಕ್ಕೆ ಸ್ಥಳೀಯರು ತೀವ್ರ ಆಕ್ರೋಶಗೊಂಡಿದ್ದರು. ಎಫ್.ಐ.ಆರ್ ದಾಖಲಿಸಿ ಪೊಲೀಸರು ಅಮ್ಜದ್ನನ್ನು ಬಂಧಿಸಿದ್ದಾರೆ.

ವೈರಲ್ ವಿಡಿಯೋದಲ್ಲಿ ಅಮ್ಜದ್ ತನ್ನ ಗ್ರಾಹಕರೊಬ್ಬರಿಗೆ ಫೇಸ್ ಮಸಾಜ್ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು. ಹೀಗೆ ಮಸಾಜ್ ಮಾಡುತ್ತಾ ಕೈ ಮೇಲೆ ಎಂಜಲು ಉಗಿದು ಅದನ್ನು ಮಿಕ್ಸ್ ಮಾಡಿ ಗ್ರಾಹಕನಿಗೆ ಫೇಸ್ ಮಸಾಜ್ ಮಾಡಿದ್ದಾನೆ.

ಜೂನ್ 08 ರಂದು ಹಂಚಿಕೊಳ್ಳಲಾದ ಈ ವಿಡಿಯೋ 16 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈತನ ಹೇಯ ಕೃತ್ಯದ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net