ಟ್ರಂಪ್ ಕುರಿತು ಒಬಾಮಾ ಹೇಳಿದ್ದೇನು?

obama-web
Published on

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೊನಾ ವೈರಸ್ ಸಾಂಕ್ರಾಮಿಕ ರೋಗವನ್ನು ನಿಭಾಯಿಸುತ್ತಿರುವ ಪರಿಯನ್ನು ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ತಮ್ಮ ಆಡಳಿತದ ಅವಧಿಯಲ್ಲಿದ್ದ ಕೆಲ ಆಪ್ತ ಸದಸ್ಯರೊಂದಿಗೆ ಮಾತನಾಡುತ್ತ ಟೀಕಿಸಿದ್ದು, ಅವರ ಫೋನ್ ಸಂಭಾಷಣೆಯ ಆಡಿಯೋ ಬಹಿರಂಗಗೊಂಡಿದೆ.

ದೇಶಕ್ಕೆ ಬಂದ ವಿಪತ್ತನ್ನು ನಿಭಾಯಿಸುವಲ್ಲಿ ಅವರು ಸಂಪೂರ್ಣ ವಿಫಲವಾಗಿದ್ದಾರೆ ಎಂದು ಒಬಾಮಾ ಕಿಡಿ ಕಾರಿದ್ದಾರೆ.

ಕೋವಿಡ್-19 ನಿಂದಾಗಿ ಅಮೆರಿಕದಲ್ಲಿ 78,400 ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ ಮತ್ತು 1.3 ಮಿಲಿಯನ್ ಪಾಜಿಟಿವ್ ಪ್ರಕರಣಗಳಿವೆ.

ನವೆಂಬರ್​​​ನಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್​ ವಿರುದ್ಧ ಕಣಕ್ಕಿಳಿಯಲು ಸಿದ್ಧತೆ ನಡೆಸುತ್ತಿರುವ ಜೋ ಬಿಡೆನ್ ಅವರನ್ನು ಬೆಂಬಲಿಸಿ ಪ್ರಚಾರ ನಡೆಸುವಂತೆ ಒಬಾಮಾ ತನ್ನ ಬೆಂಬಲಿಗರಿಗೆ ಕರೆ ನೀಡಿದ್ದಾರೆ.

ಒಟ್ಟಿನಲ್ಲಿ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಅಮೆರಿಕದಲ್ಲಿ ಹಲವು ರಹಸ್ಯ ಹಾಗೂ ಕುತೂಹಲಕಾರಿ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಈಗಿನಿಂದಲೇ ಚುನಾವಣಾ ಕಾವು ಏರುತ್ತಿರುವುದು ಇದರಿಂದ ತಿಳಿದುಬರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net