

ಬೆಂಗಳೂರು: ಕರೊನಾ ಲಾಕ್ಡೌನ್ನಿಂದಾಗಿ ರಾಜ್ಯದಲ್ಲಿ 5 ತಿಂಗಳಿಂದ ಮುಚ್ಚಲಾಗಿದ್ದ ಬಾರ್, ಪಬ್ ಹಾಗೂ ಕ್ಲಬ್ಗಳ ಬಾಗಿಲು ಮಂಗಳವಾರದಿಂದ (ಸೆ.1) ತೆರೆದಿವೆ.
ಕರೊನಾ ಹಿನ್ನೆಲೆಯಲ್ಲಿ ಸಿಎಲ್2, ಸಿಎಲ್9 ಹಾಗೂ ಸಿಎಲ್11ಸಿ ಮದ್ಯದಂಗಡಿಗಳಲ್ಲಿ ಮದ್ಯ ಪಾರ್ಸೆಲ್ಗೆ ಮಾತ್ರವೇ ಅವಕಾಶ ನೀಡಲಾಗಿತ್ತು. ಇದೀಗ ಅನ್ಲಾಕ್ 4.0 ಜಾರಿ ಹಿನ್ನೆಲೆಯಲ್ಲಿ ಬಾರ್, ಪಬ್, ಕ್ಲಬ್ಗಳಿಗೆ ಕಾರ್ಯಾರಂಭ ಮಾಡಲು ಷರತ್ತುಬದ್ಧ ಅನುಮತಿ ನೀಡಲಾಗಿದೆ. ಅಲ್ಲೇ ಕುಳಿತುಕೊಂಡು ಆಹಾರದೊಂದಿಗೆ ಮದ್ಯ ಕುಡಿಯೋಕು ಗ್ರೀನ್ ಸಿಗ್ನಲ್ ಸಿಕ್ಕಿದೆ. ಆದರೂ ವ್ಯಾಪಾರ ಮೊದಲಿನಂತಿಲ್ಲ. ಗ್ರಾಹಕರ ಸಂಖ್ಯೆ ಕಡಿಮೆಯಾಗಿದ್ದು, ಅಷ್ಟೇನೂ ವ್ಯಾಪಾರ ವಹಿವಾಟು ನಡೆದಿಲ್ಲ. ಇದನ್ನೂ ಓದಿರಿ ಅಪ್ಪ-ಅಮ್ಮನಿಗೂ ಹೇಳದೆ ಮದುವೆಯಾದ ಯುವತಿ ಗಂಡನ ಮನೆಯ ಕಿಟಕಿಯಲ್ಲಿ ಶವವಾದ್ಲು!
ಕರೊನಾ ಬರುವ ಮುನ್ನ ಬಾರ್ಗಳಲ್ಲಿ ನಿತ್ಯ 1 ಲಕ್ಷ ರೂ.ಗಿಂತ ಹೆಚ್ಚು ವ್ಯಾಪಾರವಾಗುತ್ತಿತ್ತು. ಇದೀಗ ಪ್ರತಿನಿತ್ಯ 10ರಿಂದ 15 ಸಾವಿರ ರೂ.ವರೆಗೆ ವ್ಯಾಪಾರ ಆಗುತ್ತಿದೆಯಷ್ಟೆ. ಬಾರ್ಗಳಲ್ಲಿ ಆಹಾರದ ಜತೆಗೆ ಮದ್ಯ ಸೇವಿಸಲು ಅನುಮತಿ ನೀಡಿದ್ದರೂ ಹೆಚ್ಚಿನ ಗ್ರಾಹಕರು ಬಂದಿಲ್ಲ. ಈಗಾಗಲೇ ಆಹಾರ ತಯಾರಿಸುವವರು ಹಾಗೂ ಸಿಬ್ಬಂದಿ ಊರಿಗೆ ತೆರಳಿದ್ದಾರೆ. ಹೀಗಾಗಿ ಅವರು ಬಂದ ಬಳಿಕವೇ ಆಹಾರ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಮಾಲೀಕರೊಬ್ಬರು ತಿಳಿಸಿದ್ದಾರೆ.
ಕರೊನಾ ಭಯದಿಂದ ಕೆಲವರು ಮನೆಗೆ ಪಾರ್ಸೆಲ್ ತೆಗೆದುಕೊಂಡರೆ, ಇನ್ನೂ ಕೆಲವರು ನಿಂತುಕೊಂಡೇ ಕುಡಿಯುತ್ತಿದ್ದ ದೃಶ್ಯ ಕಂಡು ಬಂತು. ಮಾರುಕಟ್ಟೆ, ಮೆಜೆಸ್ಟಿಕ್ ಮತ್ತಿತರರ ಪ್ರದೇಶಗಳಲ್ಲಿರುವ ಬಾರ್ಗಳಲ್ಲಿ ಶೇ.50ಕ್ಕಿಂತ ಹೆಚ್ಚಿನ ಗ್ರಾಹಕರು ಕುಡಿಯುವ ಸಂದರ್ಭದಲ್ಲಿ ಪರಸ್ಪರ ವ್ಯಕ್ತಿಗತ ಅಂತರ ಮಾಯವಾಗಿತ್ತು.