ಬ್ಯಾಂಕ್ ನಿವೃತ್ತ ಅಧಿಕಾರಿ ವೈದ್ಯ ವಿದ್ಯಾರ್ಥಿ

mmbs student
Published on

ಭುವನೇಶ್ವರ: ಒಡಿಶಾದ 64 ವರ್ಷದ ಬ್ಯಾಂಕ್ ನಿವೃತ್ತ ಅಧಿಕಾರಿ ಜೈ ಕಿಶೋರ್ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಪಾಸ್ ಮಾಡಿ, ಬುರ್ಲಾದ ವೀರ್ ಸುರೇಂದ್ರ ಸಾಯಿ ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಪ್ರಥಮ ವರ್ಷದ ಎಂಬಿಬಿಎಸ್​ಗೆ ಪ್ರವೇಶ ಪಡೆದಿದ್ದಾರೆ.

ಎಸ್​ಬಿಐನ ಮಾಜಿ ಅಧಿಕಾರಿಯಾಗಿದ್ದ ಜೈ ಕಿಶೋರ್ ಅಂಗವಿಕಲರಾಗಿದ್ದು, ಮೀಸಲಾತಿ ವಿಭಾಗದಲ್ಲಿ ಎಂಬಿಬಿಎಸ್​ಗೆ ಪ್ರವೇಶ ಪಡೆದಿದ್ದಾರೆ. 2018ರಲ್ಲಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ವೇಳೆ, 25 ವರ್ಷ ಮೇಲ್ಪಟ್ಟವರಿಗೂ ನೀಟ್​ನಲ್ಲಿ ಅವಕಾಶ ನೀಡಬೇಕು ಎಂದು ಸುಪ್ರೀಕೋರ್ಟ್ ಹೇಳಿತ್ತು. ಇದು ಜೈಕಿಶೋರ್​ಗೆ ವರದಾನವಾಯಿತು.

ಕೋರ್ಸ್ ಪೂರ್ಣಗೊಳಿಸುವ ವೇಳೆಗೆ ಜೈ ಕಿಶೋರ್​ಗೆ 70 ವರ್ಷ ದಾಟಲಿದೆ. ವಯಸ್ಸು ಕೇವಲ ಸಂಖ್ಯೆ ಮಾತ್ರ, ಸೇವೆಗೆ ಅದು ಅಡ್ಡಿಯಾಗುವುದಿಲ್ಲ. ಜೀವಂತವಾಗಿರುವವರೆಗೂ ಜನರಿಗೆ ಸೇವೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ. ಜೈ ಕಿಶೋರ್ ಅವರ ಅವಳಿ ಮಕ್ಕಳಲ್ಲಿ ಒಬ್ಬ ಮಗಳು ಇತ್ತೀಚೆಗೆ ಸಾವನ್ನಪ್ಪಿದ್ದರು. ಈ ಘಟನೆ ಅವರನ್ನು ಎಂಬಿಬಿಎಸ್ ಹಾದಿಗೆ ಪ್ರೇರೇಪಿಸಿತು ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net