

ಚಂಡೀಗಢ: ಏಕಾಂಗಿಯಾಗಿ ವಾಸಿಸುತ್ತಿದ್ದ ಬ್ಯಾಂಕ್ ಮ್ಯಾನೇಜರ್ ಒಬ್ಬರು ಶವವಾಗಿ ಪತ್ತೆಯಾಗಿದ್ದು, ಅವರ ಮೈಮೇಲೆ ಮಹಿಳೆಯ ಒಳ ಉಡುಪು ಇರುವುದು ಪ್ರಕರಣದ ಕುರಿತಂತೆ ಕುತೂಹಲ ಮೂಡಿಸಿದೆ. ಮೇಲ್ನೋಟಕ್ಕೆ ಆತ್ಮಹತ್ಯೆ ಎಂದೆನಿಸಿದರೂ ಪೊಲೀಸರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಪಂಜಾಬ್ನ ಲುಧಿಯಾನದಲ್ಲಿ ಏಕಾಂಗಿಯಾಗಿ ವಾಸವಿದ್ದ ವಿನೋದ್ಕುಮಾರ್ ಶವವಾಗಿ ಪತ್ತೆಯಾಗಿರುವ ಬ್ಯಾಂಕ್ ಮ್ಯಾನೇಜರ್. ಇಲ್ಲಿನ ಅಮರಾಪುರದಲ್ಲಿ ವಾಸವಿದ್ದ ವಿನೋದ್ ಕುಮಾರ್ ಶವ ಶುಕ್ರವಾರ ನೇತಾಡುವ ಸ್ಥಿತಿಯಲ್ಲಿ ಕಂಡುಬಂದಿತ್ತು. ಬೆಳಗ್ಗೆ ಕೆಲಸದವಳು ಮನೆಗೆ ಬಂದು ಬಾಗಿಲು ತಟ್ಟಿದಾಗ ತೆರೆದಿರಲಿಲ್ಲ. ಹೀಗಾಗಿ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿತ್ತು.
ಬ್ಯಾಂಕ್ ಮ್ಯಾನೇಜರ್ ಪತ್ನಿ ಮತ್ತು ಮಕ್ಕಳು ಫಿರೋಜ್ಪುರದಲ್ಲಿ ನೆಲೆಸಿದ್ದು, ಮ್ಯಾನೇಜರ್ ಮಾತ್ರ ಎರಡು ವರ್ಷಗಳಿಂದ ಪ್ರತ್ಯೇಕವಾಗಿ ಬಾಡಿಗೆ ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು. ಶವದ ಮೇಲೆ ಮಹಿಳೆಯ ಒಳ ಉಡುಪು ಇದ್ದಿದ್ದಲ್ಲದೆ, ಕೋಣೆಯಲ್ಲೂ ಮಹಿಳೆಯ ಉಡುಪುಗಳು ಪತ್ತೆಯಾಗಿವೆ.
ಬ್ಯಾಂಕ್ ಮ್ಯಾನೇಜರ್ ತನ್ನ ಪತ್ನಿ ಮಕ್ಕಳನ್ನು ನೋಡಲು ಫಿರೋಜ್ಪುರಕ್ಕೆ ಹೋಗಿದ್ದು, ಗುರುವಾರ ರಾತ್ರಿ ಲುಧಿಯಾನಕ್ಕೆ ಮರಳಿದ್ದರು. ಆದರೆ ಶುಕ್ರವಾರ ಬೆಳಗ್ಗೆ ಅವರ ಶವ ನೇತಾಡುತ್ತಿತ್ತು. ಮ್ಯಾನೇಜರ್ ಫೋನ್ ಸೈಬರ್ ಸೆಲ್ಗೆ ನೀಡಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದ್ದು. ಸಾಮಾನ್ಯವಾಗಿ ಆತ್ಮಹತ್ಯೆ ಈ ರೀತಿ ನಡೆಯುವುದು ಅಸಹಜ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದು, ಕುತೂಹಲ ಕೆರಳಿಸಿರುವ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಸಂಗತಿ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.