ಜುಲೈ ತಿಂಗಳಿನಲ್ಲಿ 15 ದಿನ ಬ್ಯಾಂಕ್​ ಬಂದ್​​​, ಇಲ್ಲಿದೆ ಪೂರ್ತಿ ವಿವರ….

bank holiday
Published on

ದೆಹಲಿ: ಗ್ರಾಹಕರ ಹಿತದೃಷ್ಟಿಯಿಂದ ಪ್ರತಿ ಹೊಸ ತಿಂಗಳು ಆರಂಭವಾಗುವ ಮುನ್ನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ಬ್ಯಾಂಕ್​ಗಳ ರಜಾಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಅದರಂತೆ ಜೂನ್​ ತಿಂಗಳು ಮುಕ್ತಾಯವಾಗಲು ಕೆಲವು ದಿನಗಳು ಬಾಕಿಯಿವೆ. ಈ ಹಿನ್ನೆಲೆಯಲ್ಲಿ ಆರ್​ಬಿಐ ಜುಲೈ ತಿಂಗಳ ಬ್ಯಾಂಕ್ ರಜೆಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.

ಜುಲೈ ತಿಂಗಳ ರಜಾ ಪಟ್ಟಿಯ ಪ್ರಕಾರ ಭಾರತದಲ್ಲಿ ಒಟ್ಟು 15 ದಿವಸ ಬ್ಯಾಂಕ್​ಗೆ ರಜೆ ಇರಲಿದ್ದು. ವಾರದ ರಜೆ, ರಾಜ್ಯಗಳ ಪ್ರಾದೇಶಿಕ ರಜೆ ಹಾಗೂ ಆಯಾ ರಾಜ್ಯಗಳ ಹಬ್ಬಗಳಿಗನುಸಾರವಾಗಿ ಆರ್​ಬಿಐ ಬಿಡುಗಡೆ ಮಾಡಿರುವ ಮುಂದಿನ ತಿಂಗಳ ರಜಾ ದಿನಗಳ ಪಟ್ಟಿ ಇಂತಿದೆ:

2023ರ ಜುಲೈ ತಿಂಗಳ ಬ್ಯಾಂಕ್ ರಜಾದಿನಗಳ ಪಟ್ಟಿ ಇಲ್ಲಿದೆ:

ಜುಲೈ 2: ಭಾನುವಾರ

ಜುಲೈ 5: ಗುರು ಹರಗೋಬಿಂದ್ ಜಿ ಅವರ ಜನ್ಮದಿನ (ಜಮ್ಮು ಮತ್ತು ಶ್ರೀನಗರ)

ಜುಲೈ 6: ಮಿಜೋ ಮಹಿಳಾ ಏಕೀಕರಣ ಕಾರ್ಯಕ್ರಮ ದಿನ (ಮಿಜೋರಾಂ)

ಜುಲೈ 8: ಎರಡನೇ ಶನಿವಾರ

ಜುಲೈ 9: ಭಾನುವಾರ

ಜುಲೈ 11: ಕೇರ್ ಪೂಜಾ (ತ್ರಿಪುರ)

ಜುಲೈ 13: ಭಾನು ಜಯಂತಿ (ಸಿಕ್ಕಿಂ)

ಜುಲೈ 16: ಭಾನುವಾರ

ಜುಲೈ 17: ಯು.ತಿರೋತ್​ ಸಿಂಗ್​ ದಿನ (ಮೇಘಾಲಯ)

ಜುಲೈ 21: ದ್ರುಕ್ಪಾ ಶೆ ಜಿ (ಸಿಕ್ಕಿಂ)

ಜುಲೈ 22: ನಾಲ್ಕನೇ ಶನಿವಾರ

ಜುಲೈ 23: ಭಾನುವಾರ

ಜುಲೈ 28: ಅಶೂರಾ (ಜಮ್ಮು ಮತ್ತು ಶ್ರೀನಗರ)

ಜುಲೈ 29: ಮೊಹರಂ (ತ್ರಿಪುರ, ಮಿಜೋರಾಂ, ಜಾರ್ಖಂಡ್, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಮಧ್ಯಪ್ರದೇಶ, ಬಿಹಾರ, ಉತ್ತರ ಪ್ರದೇಶ, ನವದೆಹಲಿ, ರಾಜಸ್ಥಾನ, ಹಿಮಾಚಲ ಪ್ರದೇಶ, ತಮಿಳುನಾಡು, ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶದಾದ್ಯಂತ ಹಲವಾರು ನಗರಗಳಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ)

ಜುಲೈ 30: ಭಾನುವಾರ

ಈ ರಜೆಗಳು ಪ್ರಾದೇಶಿಕಕ್ಕೆ ಅನುಗುಣವಾಗಿ ಬದಲಾಗುತ್ತಿರುತ್ತವೆ ಎಂಬುದನ್ನು ಗ್ರಾಹಕರು ನೆನಪಿನಲ್ಲಿಟ್ಟುಕೊಳ್ಳಬೇಕು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net