3,500 ಶಂಕಿತ ಕೊಲೆಗಳ ಹಿಂದೆ ಮಾಜಿ ಪ್ರಧಾನಿ Sheikh Hasina ಕೈವಾಡವಿದೆ! ಬಾಂಗ್ಲಾದೇಶ ಆರೋಪ

Sheikh Hasina
Published on

ಬಾಂಗ್ಲಾದೇಶ:  3,500 ಶಂಕಿತ ಕೊಲೆಗಳ ಹಿಂದೆ ಮಾಜಿ ಪ್ರಧಾನಿ ಶೇಖ್ ಹಸೀನಾ (Sheikh Hasina )  ಕೈವಾಡವಿದೆ ಎಂದು ಬಾಂಗ್ಲಾದೇಶ ಸರ್ಕಾರದ ವಿಶೇಷ ತನಿಖಾ ಆಯೋಗದ ಅಧ್ಯಕ್ಷ ಮೊಯಿನುಲ್ ಇಸ್ಲಾಂ ಚೌಧರಿ ಆರೋಪಿಸಿದ್ದಾರೆ.

ಶೇಖ್ ಹಸೀನಾ ಅವರ ಆಳ್ವಿಕೆಯಲ್ಲಿ ಅನೇಕ ಸರ್ಕಾರಿ ಅಧಿಕಾರಿಗಳ ಅಪಹರಣಗಳು ಮತ್ತು ಕೊಲೆಗಳು ನಡೆದವು. ಈ ಕೊಲೆಗಳನ್ನು ನಡೆಸಲು ಹಸೀನಾ ಪೊಲೀಸ್ ಅಪರಾಧ ನಿಗ್ರಹ ವಿಭಾಗದ 'ರ್ಯಾಪಿಡ್ ಆಕ್ಷನ್ ಬೆಟಾಲಿಯನ್' ಬಳಸಿಕೊಂಡಿದ್ದಾಳೆ. ಯಾವುದೇ ಸಾಕ್ಷ್ಯಾಧಾರಗಳು ಸಿಗದೇ ಕೆಲವು ಅಧಿಕಾರಿಗಳನ್ನು ಕೊಂದಿದ್ದರಲ್ಲಿ ಆ ಬೆಟಾಲಿಯನ್‌ನ ಸಿಬ್ಬಂದಿ ಪಾತ್ರವಿದೆ ಎಂದು ಮೊಯಿನುಲ್ ಇಸ್ಲಾಂ ಚೌಧರಿ ಹೇಳಿದ್ದಾರೆ.

“ಹಸೀನಾ ಅವರ ಆಡಳಿತದಲ್ಲಿ, ಉತ್ತಮ ಯೋಜಿತ ಯೋಜನೆಯ ಪ್ರಕಾರ ಅಧಿಕಾರಿಗಳನ್ನು ಅಪಹರಿಸಿ ಕೊಲ್ಲಲಾಯಿತು. ಈ ಎಲ್ಲಾ ಕೊಲೆಗಳು ಬಹುತೇಕ ಒಂದೇ ಸ್ವರೂಪ ಪಡೆದುಕೊಂಡಿವೆ. ಹತ್ಯೆಗೂ ಮುನ್ನ ಅಧಿಕಾರಿಗಳಿಗೆ ಚಿತ್ರಹಿಂಸೆ ನೀಡಲಾಗಿತ್ತು. ತನಿಖಾ ಆಯೋಗದ ಅಧ್ಯಕ್ಷರು ಬಾಂಗ್ಲಾದೇಶದ ಮಧ್ಯಂತರ ಸರ್ಕಾರಕ್ಕೆ ಈ ದುಷ್ಕೃತ್ಯಗಳ ಭಾಗವಾಗಿರುವ 'ರಾಪಿಡ್ ಆಕ್ಷನ್ ಬೆಟಾಲಿಯನ್' ಅನ್ನು ರದ್ದುಗೊಳಿಸುವಂತೆ ಶಿಫಾರಸು ಮಾಡಿದ್ದಾರೆ.

ಈ ಕೊಲೆ ಮತ್ತು ಅಪಹರಣ ಪ್ರಕರಣಗಳಲ್ಲಿ ನಿವೃತ್ತ ಸೇನಾಧಿಕಾರಿ ತಾರಿಕ್ ಅಹ್ಮದ್ ಸಿದ್ದಿಕ್, ದೂರಸಂಪರ್ಕ ವಿಭಾಗದ ಮಾಜಿ ಮುಖ್ಯಸ್ಥ ಜಿಯಾವುಲ್ ಅಹ್ಸಾನ್, ಪೊಲೀಸ್ ಅಧಿಕಾರಿಗಳಾದ ಮುನೀರುಲ್ ಇಸ್ಲಾಂ ಮತ್ತು ಮೊಹಮ್ಮದ್ ಹರುನೂರು ರಶೀದ್ ಅವರ ಪಾತ್ರವೂ ಇದೆ ಎಂದು ತನಿಖಾ ಆಯೋಗದ ಅಧ್ಯಕ್ಷ ಮೊಯಿನುಲ್ ಇಸ್ಲಾಂ ಹೇಳಿದ್ದಾರೆ.

ಶೇಖ್ ಹಸೀನಾ ಆಗಸ್ಟ್ 5 ರಂದು ಬಾಂಗ್ಲಾದೇಶದಿಂದ ಪಲಾಯನ ಮಾಡಿದರು. ಇದರಿಂದಾಗಿ ಈ ಕೊಲೆಗಳಲ್ಲಿ ಪಾತ್ರವಿರುವವರೂ ಹೊರರಾಜ್ಯಗಳಿಗೆ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಇವರೆಲ್ಲರ ವಿರುದ್ಧ ಪ್ರಕರಣಗಳು ದಾಖಲಾಗಿದ್ದು, ಬಾಂಗ್ಲಾದೇಶ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಅವರ ಪತ್ತೆಗೆ ಪ್ರಯತ್ನ ನಡೆಸಲಾಗುತ್ತಿದೆ. ವಿದೇಶದಿಂದ ಬಾಂಗ್ಲಾದೇಶಕ್ಕೆ ಕರೆತರುವ ತಂತ್ರವನ್ನೂ ರೂಪಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net