ಬಂಗಾರು ತಿರುಪತಿಯಲ್ಲಿ ಭಕ್ತರ ಹರಕೆಯ ಮುಡಿ 66.44 ಲಕ್ಷ ರೂ.ಗೆ ಹರಾಜು! ಇದೇ ಮೊದಲ ಬಾರಿಗೆ ಹೆಚ್ಚಿನ ದರಕ್ಕೆ ಬಿಕರಿ

bangaru tirupati
Published on

ಕೊಲಾರ: ಇತಿಹಾಸ ಪ್ರಸಿದ್ಧ ಬಂಗಾರು ತಿರುಪತಿಯ ಪ್ರಸನ್ನ ವೆಂಕಟರಮಣಸ್ವಾಮಿ ಸ್ವಾಮಿ ದೇವಾಲಯದಲ್ಲಿ ಇದೇ ಮೊದಲ ಬಾರಿಗೆ ಭಕ್ತರ ಹರಕೆಯ ಮುಡಿ (ಕೂದಲು) 66.44 ಲಕ್ಷ ರೂ.ಗೆ ಬಿಕರಿಯಾಗುವ ಮೂಲಕ ದಾಖಲೆ ಬರೆದಿದೆ.

ಬೇತಮಂಗಲ ಹೋಬಳಿಯ ಬಂಗಾರು ತಿರುಪತಿಯಲ್ಲಿ ಭಕ್ತರ ಹರಕೆಯ ಮುಡಿ (ಕೂದಲು) ಕಳೆದ ವರ್ಷ 34 ಲಕ್ಷ ರೂಪಾಯಿಗೆ ಹರಾಜು ಆಗಿತ್ತು. ಅದಕ್ಕೂ ಮುನ್ನ 15 ಲಕ್ಷ ರೂ.ಗೆ ಹರಾಜು ಮಾಡಲಾಗಿತ್ತು. ಈ ವರ್ಷ ಆಂಧ್ರ ಮೂಲದ ವ್ಯಾಪಾರಿಯೊಬ್ಬರು ಬರೋಬ್ಬರಿ 66.44 ಲಕ್ಷ ರೂ.ಗೆ ಖರೀದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net