ಬಂಗಾರಪ್ಪ ಸಾಮಾಜಿಕ ಕಳಕಳಿಯ ಶ್ರೇಷ್ಠ ನಾಯಕ

banagarapa
ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಜನ್ಮದಿನಾಚರಣೆಯಲ್ಲಿ ಎಚ್.ಆಂಜನೇಯ, ಚಂದ್ರಪ್ಪ, ಗೋಣಿ ಮಾಲತೇಶ್, ಭಂಡಾರಿ ಮಾಲತೇಶ್, ಬಡಗಿ ಪಾಲಾಕ್ಷಪ್ಪ, ಸುರೇಶ್ ಕಲ್ಮನೆ, ತಿಮ್ಮಣ್ಣ, ಚಂದ್ರಕಾಂತ್ ಪಾಟೀಲ್, ಜೀನಳ್ಳಿ ದೊಡ್ಡಪ್ಪ, ನಾಗರಾಜ ನಾಯ್ಕ್, ಗೋಣಿ ಪ್ರಕಾಶ್, ಕಮಲಮ್ಮ ಹುಲ್ಮಾರ್, ಶಿವಕುಮಾರ್ ಇತರರಿದ್ದರು.
Published on

ಶಿಕಾರಿಪುರ: ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಸಾಮಾಜಿಕ ಕಳಕಳಿಯ ಶ್ರೇಷ್ಠ ನಾಯಕ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು. ಮಂಗಳವಾರ ಶಿಕಾರಿಪುರದ ಕಾಂಗ್ರೆಸ್ ಕಚೇರಿಯಲ್ಲಿ ಏರ್ಪಡಿಸಿದ್ದ ಬಂಗಾರಪ್ಪ ಜನ್ಮ ದಿನಾಚರಣೆಯಲ್ಲಿ ಮಾತನಾಡಿ, ದೇವರಾಜ ಅರಸು ಅವರ ನಂತರ ಹಿಂದುಳಿದವರ ಪಾಲಿಗೆ ದನಿಯಾಗಿ ನಿಂತವರು ಬಂಗಾರಪ್ಪ. ಅವರ ಅಕ್ಷಯ, ಆಶ್ರಯ, ಆರಾಧನ ಮತ್ತು ಗ್ರಾಮೀಣ ಕೃಪಾಂಕದಂತಹ ಕಾರ್ಯಕ್ರಮಗಳು ಇಂದಿಗೂ ಜನಮಾನಸದಲ್ಲಿ ಹಾಸು ಹೊಕ್ಕಾಗಿವೆ ಎಂದರು. ಬರಗಾಲ ಸಂದರ್ಭದಲ್ಲಿ ರೈತರಿಗೆ ಉಚಿತವಾಗಿ ಬೀಜ ನೀಡಿದ್ದರು. ಸಂವಿಧಾನದ ಆಶಯಗಳಿಗೆ ತಕ್ಕಂತೆ ನಡೆದ ನಾಯಕ. ಛಲ ಬಿಡದ ತ್ರಿವಿಕ್ರಮನಂತೆ ಆಡಳಿತ ನಡೆಸಿದರು ಎಂದರು. ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷ ಚಂದ್ರಪ್ಪ, ಪ್ರಮುಖರಾದ ಗೋಣಿ ಮಾಲತೇಶ್, ಭಂಡಾರಿ ಮಾಲತೇಶ್, ಬಡಗಿ ಪಾಲಾಕ್ಷಪ್ಪ, ಸುರೇಶ್ ಕಲ್ಮನೆ, ತಿಮ್ಮಣ್ಣ, ಚಂದ್ರಕಾಂತ್ ಪಾಟೀಲ್, ಜೀನಳ್ಳಿ ದೊಡ್ಡಪ್ಪ, ನಾಗರಾಜ್ ನಾಯ್ಕ್, ಚಂದ್ರಪ್ಪ, ಗೋಣಿ ಪ್ರಕಾಶ್, ಕಮಲಮ್ಮ ಹುಲ್ಮಾರ್, ಶಿವಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net