

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರತಿ ವರ್ಷವೂ ವಾಣಿಜ್ಯ ವಿಭಾಗಕ್ಕೆ ದಾಖಲಾತಿಗೊಳ್ಳುವವರೇ ಅಧಿಕ. ಆದರೆ ಈ ವರ್ಷ ವಿಶೇಷವೆಂಬಂತೆ, ವಿಜ್ಞಾನ ವಿಭಾಗದ ಕೋರ್ಸ್‌ಗಳಿಗೆ ದಾಖಲಾತಿ ಹೆಚ್ಚಳವಾಗಿದ್ದು, ವಾಣಿಜ್ಯ ವಿಭಾಗಕ್ಕೆ ಇಳಿಮುಖವಾಗಿದೆ.
ಬೆಂಗಳೂರು ವಿಶ್ವವಿದ್ಯಾಲಯವು ಬಹಿರಂಗಗೊಳಿಸಿದ 2023-24ನೇ ಸಾಲಿನ ಸ್ನಾತಕೋತ್ತರ ಪದವಿ ದಾಖಲಾತಿ ವಿವರಗಳನ್ನು ಹಾಗೂ ಮೆರಿಟ್‌ಪಟ್ಟಿಯಿಂದ ವಿಚಾರ ಬೆಳಕಿಗೆ ಬಂದಿದೆ. ವಿಜ್ಞಾನ ವಿಭಾಗದ ವಿಧಿ ವಿಜ್ಞಾನ, ಪ್ರಾಣಿಶಾಸ ಸಹಿತ ವಿವಿಧ ಕೋರ್ಸ್‌ಗಳಿಗೆ 30ರಿಂದ 50 ಸೀಟುಗಳು ಲಭ್ಯವಿದ್ದು, ಬರೋಬ್ಬರಿ 280ರಿಂದ 300 ಅರ್ಜಿಗಳೂ ಸಲ್ಲಿಕೆಯಾಗಿವೆ. ಈ ಹಿನ್ನೆಲೆಯಲ್ಲಿ ಕೌನ್ಸೆಲಿಂಗ್ ನಡೆಯಲಿದ್ದು, ಸೀಟು ಹಂಚಿಕೆಯು ನಡೆಯಲಿದೆ.
ವಾಣಿಜ್ಯ ವಿಭಾಗದ ಕೋರ್ಸ್‌ಗಳಲ್ಲಿ 600 ಸೀಟ್‌ಗಳು ಇದ್ದು, 900 ಅರ್ಜಿಗಳು ಸ್ವೀಕೃತಗೊಂಡಿವೆ. ಕಲಾಕೋರ್ಸ್‌ಗಳಿಗೆ ಸೇರಲಿಚ್ಛಿಸುವವರ ಸಂಖ್ಯೆಯೂ ಇಳಿಮುಖವಾಗಿದ್ದು, ಕನ್ನಡ ಭಾಷೆಗೆ 159 ಹಾಗೂ ಆಂಗ್ಲಭಾಷೆಗೆ 38 ಅರ್ಜಿಗಳಷ್ಟೇ ಸಲ್ಲಿಕೆಯಾಗಿವೆ.
ಕೋರ್ಸ್ ಲಭ್ಯ ಹಾಗೂ ಸೀಟು ಅರ್ಜಿಗಳು
ಸೂಕ್ಷ್ಮಜೀವಾಣುಶಾಸ್ತ್ರ- 160 342
ಆಹಾರ ತಂತ್ರಜ್ಞಾನ 51 247
ಜೈವಿಕ ತಂತ್ರಜ್ಞಾನ 160 300
ವಿಧಿವಿಜ್ಞಾನ 30 250
ಪ್ರಾಣಿಶಾಸ್ತ್ರ 86 270
ಭೌತಶಾಸ್ತ್ರ 86 300
ಗಣಿತ 160 600
ಯಾಕೆ ವಾಣಿಜ್ಯಕ್ಕೆ ಕುಸಿತ?
ಬೆಂಗಳೂರು ವಿವಿಯಿಂದ ಎಂ.ಕಾಂ ಜತೆಗೆ ವಿವಿಧ ಕೋರ್ಸ್‌ಗಳಿಗೆ ಪ್ರವೇಶ ನೀಡಲಾಗುತ್ತಿತ್ತು. ಆದರೆ ಪಿಜಿಸಿಇಟಿ ಪ್ರತ್ಯೇಕಗೊಂಡ ಕಾರಣ ಲಭ್ಯವಿರುವ ಹುದ್ದೆಗಳಿಗೆ ಕೆಇಎ ಮೂಲಕ ಭರ್ತಿ ನಡೆಯಲಿದೆ. ಹೀಗಾಗಿ ಲಭ್ಯವಿರುವ ಕೋರ್ಸ್‌ಗಳ ಬೇಡಿಕೆ ಇಳಿಮುಖವಾಗಿದೆ.