ಕೌಶಲಾಭಿವೃದ್ಧಿ ಶಿಕ್ಷಣಕ್ಕಾಗಿ ಇನ್ಫೋಸಿಸ್ ಜತೆ ಬೆಂಗಳೂರು ವಿವಿ ಒಡಂಬಡಿಕೆ

skill
Published on

ಬೆಂಗಳೂರು ವಿದ್ಯಾರ್ಥಿಗಳಲ್ಲಿ ಕೌಶಲ ಅಭಿವೃದ್ಧಿಗಾಗಿ ಬೆಂಗಳೂರು ವಿವಿ ಇನ್ಫೋಸಿಸ್ ಜತೆ ಒಡಂಬಡಿಕೆ ಮಾಡಿಕೊಂಡಿದೆ. ಆನ್‌ಲೈನ್ ಮೂಲಕ ಉಚಿತವಾಗಿ ಕೌಶಲ ಕೋರ್ಸ್‌ಗಳನ್ನು ಕಲಿಸಿಕೊಡಲಾಗುತ್ತಿದೆ.

ಇನ್ಫೋಸಿಸ್ ಸ್ವಿಂಗ್ ಬೋರ್ಡ್ ಪ್ಲಾಟ್‌ಫಾರಂನಡಿ ಕಂಪ್ಯೂಟರ್ ಸೈನ್ಸ್, ಮಾಹಿತಿ ತಂತ್ರಜ್ಞಾನ, ಇಂಜಿನಿಯರಿಂಗ್, ಕಾನೂನು, ವಾಣಿಜ್ಯ, ಸಂವಹನ ಕೌಶಲ ಸೇರಿ 20 ಸಾವಿರಕ್ಕಿಂತ ಹೆಚ್ಚು ಆನ್‌ಲೈನ್ ಕೋರ್ಸ್‌ಗನ್ನು ನೀಡಲಾಗಿದೆ. .ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ ಉದ್ಯೋಗ ಪಡೆದುಕೊಳ್ಳಲು ಸಹಕಾರಿಯಾಗುವಂತೆ ನೋಡಿಕೊಳ್ಳಲು ಸಲಹೆ ನೀಡಲಾಯಿತು.

ಪ್ರಸ್ತುತ ಕಾಲಘಟ್ಟದಲ್ಲಿ ಮೌಲ್ಯಾಧಾರಿತ ಶಿಕ್ಷಣದ ಅವಶ್ಯಕತೆ ಬಹಳ ಮುಖ್ಯವಾಗಿದ್ದು, ಪಠ್ಯದ ಜತೆಗೆ ಕೌಶಲಾಭಿವೃದ್ಧಿ, ವ್ಯಕ್ತಿತ್ವ ವಿಕಸನವನ್ನು ರೂಪಿಸುವ ಜವಾಬ್ದಾರಿ ವಿಶ್ವವಿದ್ಯಾಲಯದ ಮೇಲಿದೆ ಎಂದು ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ. ಎಸ್.ಆರ್. ನಿರಂಜನ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂಬಂಧ ಬುಧವಾರ ಬೆಂಗಳೂರು ವಿಶ್ವವಿದ್ಯಾಲಯವು ಕಾಲೇಜು ಪ್ರಾಧ್ಯಾಪಕರಿಗೆ ಬುಧವಾರ ಹಮ್ಮಿಕೊಂಡಿದ್ದ ಕೌಶಲ ಅಭಿವೃದ್ಧಿ ಕಾರ್ಯಾಗಾರವನ್ನು ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ. ಎಸ್.ಆರ್. ನಿರಂಜನ ಉದ್ಘಾಟಸಿ ಮಾತನಾಡಿದರು.

ಕಾರ್ಯಗಾರದಲ್ಲಿ ವಿವಿ ವ್ಯಾಪ್ತಿಯ 200ಕ್ಕೂ ಹೆಚ್ಚು ಪ್ರಾಧ್ಯಾಪಕರು ಭಾಗವಹಿಸಿದ್ದರು. ವಿವಿ ಕುಲಪತಿ ಡಾ.ಎಸ್.ಎಂ. ಜಯಕರ್, ಕುಲಸಚಿವ ಶೇಕ್ ಲತ್ೀ, ಮೌಲ್ಯಮಾಪನ ಕುಲಸಚಿವ ಸಿ. ಶ್ರೀನಿವಾಸ್, ವಿಭಾಗದ ಡೀನ್ ಡಾ. ಆರ್. ಸರ್ವಮಂಗಳ, ಕೌಶಲಾಭಿವೃದ್ಧಿ ಇಲಾಖೆ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಡಿ. ಗೌಡ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net