ಹಾಲಿನ ಪ್ರೋತ್ಸಾಹ ಧನ ಕಡಿತಗೊಳಿಸಿ ಆದೇಶ: ರೈತರಿಗೆ ಶಾಕ್

milk
Published on

ಬೆಂಗಳೂರು: ರೈತರಿಗೆ ನೀಡುತ್ತಿದ್ದ ಹಾಲಿನ ಪ್ರೋತ್ಸಾಹ ಧನವನ್ನು ಕಡಿತಗೊಳಿಸಿ ಬೆಂಗಳೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟವು ಆದೇಶ ಹೊರಡಿಸಿದೆ.

ಪ್ರತಿ ಲೀಟರ್​​ಗೆ 1.50 ರೂ. ಪ್ರೋತ್ಸಾಹ ಧನವನ್ನು ಕಡಿತಗೊಳಿಸಿ ಆದೇಶ ಹೊರಡಿಸಿದೆ. ಈ ಹಿಂದೆ ಹಾಲು ಒಕ್ಕೂಟವು ಬೇಸಿಗೆ ಸಮಯದಲ್ಲಿ ಏ. 1ರಿಂದ ಮೇ. 31 ರವರೆಗೆ ಪ್ರತಿ ಲೀಟರ್ ಹಾಲಿಗೆ 2.85 ರೂ. ವಿಶೇಷ ಪ್ರೋತ್ಸಾಹ ಧನ ಘೋಷಿಸಿತ್ತು.

ಸದ್ಯ, ಉತ್ತಮ ಮಳೆಯಾಗಿ ಹಸಿರು ಮೇವಿನ ಲಭ್ಯತೆ ಜಾಸ್ತಿಯಾಗಿದ್ದು, ಹಾಲು ಉತ್ಪಾದನೆ ಹೆಚ್ಚಾಗುತ್ತಿದೆ. ಏಪ್ರಿಲ್ ತಿಂಗಳ ಆರಂಭದಲ್ಲಿ ಪ್ರತಿದಿನ 13.50 ಲಕ್ಷ ಲೀಟರ್ ಉತ್ಪಾದನೆಯಾಗುತ್ತಿದ್ದ ಹಾಲು, ಈಗ 16 ಲಕ್ಷ ಲೀಟರ್​ಗೆ ತಲುಪಿದೆ. ದಿನದಲ್ಲಿ ಸುಮಾರು 2.50 ಲಕ್ಷ ಲೀಟರ್ ಹಾಲು ಉತ್ಪಾದನೆ ಹೆಚ್ಚಳವಾಗಿದ್ದು, ಹಾಗಾಗಿ ಪ್ರೋತ್ಸಾಹ ಧನ ಕಡಿತಗೊಳಿಸಿ ಆದೇಶ ಹೊರಡಿಸಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net