ಬೆಂ.ನಗರ ವಿವಿ: ಜಾಗತಿಕ ಭಾಷಾ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನ

global-language
Published on

ಬೆಂಗಳೂರು: ಬೆಂಗಳೂರು ನಗರ ವಿಶ್ವವಿದ್ಯಾಲಯ ್ರೆಂಚ್, ಜರ್ಮನ್, ಸ್ಪಾನಿಷ್, ಜಪಾನಿ, ಚೀನಿ, ಕೊರಿಯಾ, ಇಟಾಲಿಯನ್ ಮತ್ತು ಪೋರ್ಚಗೀಸ್ ಮುಂತಾದ ಜಾಗತಿಕ ಭಾಷೆಗಳ ಕೋರ್ಸ್‌ಗಳ ಪ್ರವೇಶಕ್ಕಾಗಿ ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.

ಅರ್ಜಿಗಳನ್ನು ಬೆಂ.ನಗರ ವಿವಿ ಜಾಗತಿಕ ಭಾಷೆಗಳ ವಿಭಾಗ, ಪ್ರಸನ್ನ ಕುಮಾರ್ ಬ್ಲಾಕ್, ಸೆಂಟ್ರಲ್ ಕಾಲೇಜು ಆವರಣದಲ್ಲಿ ಪಡೆಯಬಹುದಾಗಿದೆ. ಅರ್ಜಿಗಳನ್ನು ಸಲ್ಲಿಸಲು ಸೆ.10 ಕೊನೆಯ ದಿನವಾಗಿದ್ದು, 200 ರೂ ದಂಡ ಶುಲ್ಕದೊಂದಿಗೆ ಸೆ.15ರ ವರೆಗೆ ಪ್ರವೇಶ ಪಡೆಯಬಹುದಾಗಿದೆ.

ತರಗತಿಗಳು ಸೆ.20ರಿಂದ ಆರಂಭವಾಗಲಿದೆ. ಒಂದು ವರ್ಷದ ಸರ್ಟಿಫಿಕೇಟ್ ಕೋರ್ಸ್‌ಗೆ ರೂ. 10,250 ರೂ. ಪದವಿ ಡಿಪ್ಲೊಮ ಕೋರ್ಸ್‌ಗೆ 12,250 ರೂ. ಹಾಗೂ ಸ್ನಾತಕೋತ್ತರ ಪದವಿ ಡಿಪ್ಲೊಮ ಕೋರ್ಸ್‌ಗೆ ರೂ.13,250 ರೂ. ಶುಲ್ಕ ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ 080-29572019 ಸಂಪರ್ಕಿಸಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net