ಬಂಡಾಯ ಕವಿಗೋಷ್ಠಿ ಮಾ.11ರಂದು

Published on

ಹಾವೇರಿ: ಬಂಡಾಯ ಸಾಹಿತ್ಯ ಸಂಘಟನೆ ಸ್ಥಾಪನೆಯಾಗಿ 44 ವರ್ಷಗಳಾದ ಹಿನ್ನೆಲೆಯಲ್ಲಿ ಮಾ.11ರಂದು ನಗರದ ಗೆಳೆಯರ ಬಳಗದ ಪ್ರಾಥಮಿಕ ಶಾಲಾ ಆವರಣದಲ್ಲಿ ಸಂಜೆ 6 ಗಂಟೆಗೆ ‘ಬಂಡಾಯ ನಲವತ್ತ್ ನಾಲ್ಕು’ ಎಂಬ ಹೆಸರಿನ ಕವಿಗೋಷ್ಠಿ ಆಯೋಜಿಸಲಾಗಿದೆ.
ಹಿರಿಯ ಸಾಮಾಜಿಕ ಕಾರ್ಯಕರ್ತ ಹೋತ್ನಳ್ಳಿ ಫಕ್ಕೀರಪ್ಪ ಕವಿಗೋಷ್ಠಿಗೆ ಚಾಲನೆ ನೀಡುವರು. ಹಿರಿಯ ಕವಿ ಹುಬ್ಬಳ್ಳಿಯ ಸಿ.ಎಂ.ಚನ್ನಬಸಪ್ಪ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ರಂಜಾನ ಹೆಬಸೂರ ಭಾಗವಹಿಸಲಿದ್ದು, ಮಾಲತೇಶ ಅಂಗೂರ ಪ್ರಾಸ್ತಾವಿಕ ಮಾತುಗಳನ್ನಾಡುವರು. 20 ಕವಿಗಳು ಕಾವ್ಯವಾಚನ ಮಾಡಲಿದ್ದಾರೆ ಎಂದು ಹಿರಿಯ ಬಂಡಾಯ ಲೇಖಕ ಸತೀಶ ಕುಲಕರ್ಣಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net