ಬನಶಂಕರಿ ದೇವಿ ಜಾತ್ರಾಮಹೋತ್ಸವ ಫೆ. 2ರಂದು

je721538035802367-abc
Published on

ಹಾವೇರಿ: ಇಲ್ಲಿಯ ಶಿವಲಿಂಗ ನಗರದ ಬನಶಂಕರಿ ದೇವಿ ಜಾತ್ರಾ ಮಹೋತ್ಸವ ಫೆ. 2ರಂದು ಜರುಗಲಿದೆ.
ಅಂದು ಬೆಳಗ್ಗೆ ದೇವಿಗೆ ಅಭಿಷೇಕ, ಹೋಮ, ಹವನ ಸೇರಿ ವಿವಿಧ ಪೂಜಾ ಕಾರ್ಯ ನಡೆಯಲಿವೆ. ಮಧ್ಯಾಹ್ನ 1 ಗಂಟೆಯಿಂದ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6 ಗಂಟೆಗೆ ಫಲಕ್ಕಿ ಉತ್ಸವ ಸಕಲ ವಾದ್ಯ ವೈಭವಗಳೊಂದಿಗೆ ದೇವಸ್ಥಾನದ ಬೀದಿಯಲ್ಲಿ ಸಾಗಲಿದೆ ಎಂದು ನಗರ ದೇವಾಂಗ ಸಮಾಜದ ಅಧ್ಯಕ್ಷ ಸೋಮಣ್ಣ ಕುದರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net