

ಬೆಂಗಳೂರು: ಬಾಣಸವಾಡಿ 300 ಕೋಟಿ ರೂ. ಮೌಲ್ಯದ 6 ಎಕರೆ ಜಮೀನು ಒತ್ತುವರಿ(Banasawadi encroachment on 6 acres of land worth 300 crores) ಗೆ ತೆರವಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ(Eswara Khandre) ಸೂಚನೆ ನೀಡಿದ್ದಾರೆ.
ಕೆ.ಆರ್.ಪುರಂ ಹೋಬಳಿ ಬಾಣಸವಾಡಿ ಗ್ರಾಮದ ಸರ್ವೇ ನಂ.64ರಲ್ಲಿ ಒಟ್ಟು 19.17 ಎಕರೆ ಜಮೀನಿದ್ದು, ಈ ಪೈಕಿ 13.27 ಎಕರೆ ಅರಣ್ಯ ಇಲಾಖೆಗೆ ಸೇರಿದೆ. ಬಿಡಿಎಗೆ 30 ಗುಂಟೆ, ರೈಲ್ವೆ ಇಲಾಖೆಗೆ 5ಎಕರೆ ಜಮೀನು ನೀಡಲಾಗಿದೆ. ಆದರೆ, ಈ ಪೈಕಿ 7 ಎಕರೆಯಷ್ಟು ಜಮೀನು ಒತ್ತುವರಿಯಾಗಿದೆ. ಹಾಲಿ ಉಳಿದಿರುವ 6.26 ಎಕರೆಯಲ್ಲಿ ತುಂಬಿದ್ದ ಹೂಳು ತೆಗೆದು ಕಾಂಪೌಂ ಹಾಕಿ ಸಸಿ ನೆಟ್ಟು ಸಂರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಸರ್ವೇ ನಂಬರ್‌ನಲ್ಲಿ ಸುಮಾರು 300 ಕೋಟಿ ರೂ. ಬೆಲೆ ಬಾಳುವ ಅರಣ್ಯ ಭೂಮಿ ಒತ್ತುವರಿಯಾಗಿದೆ ಎಂದು ಕಸ್ತೂರಿ ನಗರ ಕ್ಷೇಮಾಭಿವೃದ್ಧಿ ಸಂಘದ ತಿಳಿಸಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಹಾಗಾಗಿ ಜಂಟಿ ಸರ್ವೇ ನಡೆಸಿ ಒತ್ತುವರಿ ತೆರವುಗೊಳಿಸಬೇಕು. ಒತ್ತುವರಿದಾರರು ಹಾಗೂ ಒತ್ತುವರಿ ಬಗ್ಗೆ ನಿರ್ಲಕ್ಷ್ಯ ತೋರಿದ ಅರಣ್ಯ ಸಿಬ್ಬಂದಿ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ. ಈಶ್ವರ ಖಂಡ್ರೆ ಅವರು ಅರಣ್ಯ ಸಚಿವರಾದ ಬಳಿಕ ಬೆಂಗಳೂರು ಸುತ್ತಮುತ್ತ 107 ಎಕರೆ ಒತ್ತುವರಿ ತೆರವುಗೊಳಿಸಿದ್ದಾರೆ.