ರಾಜ್ಯಾದ್ಯಂತ ಕೋನೋಕಾರ್ಪಸ್ ಗಿಡ ನಿಷೇಧ Conocarpus

ರಾಜ್ಯದ ವಿವಿಧೆಡೆ ಬೆಳೆಸಲಾಗಿರುವ ಕೋನೋಕಾರ್ಪಸ್ ಗಿಡಗಳನ್ನು ತೆರವುಗೊಳಿಸಿ ಸ್ಥಳೀಯ ತಳಿಯ ಸಸಿಗಳನ್ನು ನಾಟಿ ಮಾಡಲು ಅರಣ್ಯ ಇಲಾಖೆ ಮುಂದಾಗಿದೆ.
Conocarpus
ರಸ್ತೆ ಬದಿಯಲ್ಲಿ ಬೆಳೆಯಲಾಗಿರುವ ಕೋನೋಕಾರ್ಪಸ್ ಗಿಡಗಳು. folder
Published on: 

ಬೆಂಗಳೂರು: ರಾಜ್ಯದ ವಿವಿಧೆಡೆ ಬೆಳೆಸಲಾಗಿರುವ ಕೋನೋಕಾರ್ಪಸ್ ಗಿಡಗಳನ್ನು ತೆರವುಗೊಳಿಸಿ ಸ್ಥಳೀಯ ತಳಿಯ ಸಸಿಗಳನ್ನು ನಾಟಿ ಮಾಡಲು ಅರಣ್ಯ ಇಲಾಖೆ ಮುಂದಾಗಿದೆ.

ದುಬೈ ಗಿಡ ಎಂದೇ ಕರೆಯಲಾಗುವ ಈ ಸಸ್ಯ, ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಇದನ್ನು ನಿಷೇಧಿಸಬೇಕು ಎಂದು ವೃಕ್ಷ ಅಂದೋಲನ ಸಮಿತಿ ಅಧ್ಯಕ್ಷ ಪರಿಸರ ಮಂಜುನಾಥ್ ಅರಣ್ಯ ಸಚಿವರು, ಇಲಾಖಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.

ಈ ಮನವಿಗೆ ಸ್ಪಂದಿಸಿರುವ ಸಚಿವ ರಾಮಲಿಂಗಾರೆಡ್ಡಿ, ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದು ಕೋನೋಕಾರ್ಪಸ್ ಗಿಡಗಳನ್ನು ತೆರವುಗೊಳಿಸುವಂತೆ ಸೂಚಿಸಿದ್ದಾರೆ.

ಬೆಂಗಳೂರು ಸೇರಿ ರಾಜ್ಯದಾದ್ಯಂತ ಅರಣ್ಯ ಇಲಾಖೆ, ಜಿಬಿಎ, ಬಿಡಿಎ ಮತ್ತು ಪಂಚಾಯಿತಿ ವ್ಯಾಪ್ತಿಯ ಪ್ರದೇಶಗಳಲ್ಲಿ ಕೋನೋಕಾರ್ಪಸ್ ಗಿಡಗಳನ್ನು ನೆಡಲಾಗಿದೆ. ಇದರಿಂದ ಅಸ್ತವಾ, ಅಲರ್ಜಿ, ನೆಗಡಿ ಹಾಗೂ ಉಸಿರಾಟದ ಸಮಸ್ಯೆಗಳಿಗೆ ಕಾರಣವಾಗುತ್ತಿವೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದರು.