

ಮುಂಬೈ: ರಿಲಯನ್ಸ್ ಹೋಮ್ ಫೈನಾನ್ಸ್ (ಆರ್ಎಚ್ಎಫ್ಎಲ್)ನಿಂದ ಹಣವನ್ನು ದುರುಪಯೋಗ ಮಾಡಿಕೊಂಡ ಕಾರಣ ಬಂಡವಾಳ ಮಾರುಕಟ್ಟೆಯಲ್ಲಿ ವಹಿವಾಟು ನಡೆಸದಂತೆ ಅನಿಲ್ ಅಂಬಾನಿ ಮತ್ತು ಇತರೆ ಮೂವರ ಮೇಲೆ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್ಚೇಂಜ್ ಬೋರ್ಡ್ ಆ್ ಇಂಡಿಯಾ (ಸೆಬಿ) ನಿಷೇಧ ಹೇರಿದೆ. ಷೇರುಪೇಟೆಯ ಯಾವುದೇ ಲಿಸ್ಟೆಡ್ ಕಂಪನಿಯ ಜತೆಗೆ ವ್ಯವಹಾರ ನಡೆಸದಂತೆ ಈ ನಾಲ್ವರಿಗೆ ಸೆಬಿ ತಾಕೀತು ಮಾಡಿದೆ. ಮುಂದಿನ ಆದೇಶದ ತನಕ ಈ ನಿಷೇಧ ಚಾಲ್ತಿಯಲ್ಲಿ ಇರಲಿದೆ ಎಂದು ಸೆಬಿ ಮೂಲಗಳು ತಿಳಿಸಿವೆ.
|
ಆರ್ಎಚ್ಎ್ಎಲ್ ಸಾಲ ಪಡೆದ ಹಣವನ್ನು ಕಂಪನಿಯ ಚೇರ್ಮನ್ ಎಂಬ ನೆಲೆಯಲ್ಲಿ ಥರ್ಡ್ಪಾಟಿರ್ ಸಾಲಗಾರರಿಗೆ ಪ್ರೊಮೋಟರ್ ಗ್ರೂಪ್ನ ಸಂಸ್ಥೆಗಳ ಮೂಲಕ ವರ್ಗಾವಣೆ ಮಾಡುವ ಮೂಲಕ ಅಧಿಕಾರ ಮತ್ತು ಹಣವನ್ನು ದುರುಪಯೋಗ ಮಾಡಿದ್ದಾರೆ ಎಂಬ ಆರೋಪ ಅನಿಲ್ ಅಂಬಾನಿ ಮತ್ತು ಇತರರ ಮೇಲೆ ಇದೆ. ಆರ್ಎಚ್ಎ್ಎಲ್ ನಷ್ಟದಲ್ಲಿರುವ ಕಂಪನಿಯಾಗಿದ್ದು, 2018ರಲ್ಲಿ 900 ಕೋಟಿ ರೂ. ಇದ್ದ ಸಾಲ 2019ರ ಮಾರ್ಚ್ ಕೊನೆಗೆ 7,900 ಕೋಟಿ ರೂಪಾಯಿ ಆಗಿತ್ತು ಎಂಬುದನ್ನು ಪಿಡಬ್ಲುಸಿ ಲೆಕ್ಕಪರಿಶೋಧನಾ ವರದಿ ತಿಳಿಸಿದೆ.
ಬ್ಯಾಂಕ್ ಆಫ್ ಬರೋಡಾ ಕನ್ಸೋಟಿರ್ಯಂನಿಂದ ಆರ್ಎಚ್ಎ್ಎಲ್ ಸಾಲ ಪಡೆದಿದ್ದು, ಫಾರೆನ್ಸಿಕ್ ಆಡಿಟ್ ಮೂಲಕ ಹಲವು ಅಂಶಗಳು ಬಹಿರಂಗವಾಗಿವೆ. ಆರ್ಎಚ್ಎಫ್ಎಲ್ 14,577 ಕೋಟಿ ರೂಪಾಯಿಯನ್ನು ಹಲವು ಸಂಸ್ಥೆಗಳಿಗೆ ವರ್ಗಾವಣೆ ಸಾಲದ ರೂಪದಲ್ಲಿ ವರ್ಗಾವಣೆ ಮಾಡಿದೆ. ಆರ್ಎಚ್ಎಫ್ಎಲ್ ಲೆಕ್ಕಪತ್ರ ಪ್ರಕಾರ ಇನ್ನೂ 8,884 ಕೋಟಿ ರೂಪಾಯಿ ವಸೂಲಿಗೆ ಬಾಕಿ ಇದೆ.
ನೇಮಕ ಅಕ್ರಮ ಎನ್ಎಸ್ಇಗೆ ದಂಡ: ಉನ್ನತಾಧಿಕಾರಿಗಳ ನೇಮಕ ಪ್ರಕ್ರಿಯೆಯಲ್ಲಿ ಅಕ್ರಮವೆಸಗಿದ ಕಾರಣ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (ಎನ್ಎಸ್ಇ) ಮತ್ತು ಇಬ್ಬರು ಮಾಜಿ ಮುಖ್ಯಸ್ಥರ ವಿರುದ್ಧ ಸೆಬಿ ಕ್ರಮ ಜರುಗಿಸಿದೆ. ಎನ್ಎಸ್ಇಯ ಮಾಜಿ ಸಿಇಒಗಳಾದ ಚಿತ್ರಾ ರಾಮಕೃಷ್ಣ ಮತ್ತು ರವಿ ನಾರಾಯಣ್ ಹಾಗೂ ಇಬ್ಬರು ಇತರೆ ಅಧಿಕಾರಿಗಳ ವಿರುದ್ಧ ನೇಮಕ ಅಕ್ರಮ ಎಸಗಿದ್ದಕ್ಕಾಗಿ ಸೆಬಿ ಶಿಸ್ತು ಕ್ರಮ ತೆಗೆದುಕೊಂಡಿದೆ.ಎನ್ಎಸ್ಇ ಇನ್ನು ಮುಂದಿನ ಆರು ತಿಂಗಳ ಅವಧಿಗೆ ಹೊಸ ಉತ್ಪನ್ನಗಳನ್ನು ಗ್ರಾಹಕರಿಗೆ ಪರಿಚಯಿಸುವಂತೆ ಇಲ್ಲ. ಚಿತ್ರಾ ರಾಮಕೃಷ್ಣಗೆ 3 ಕೋಟಿ ರೂ., ಎನ್ಎಸ್ಇ, ರವಿ ನಾರಾಯಣ್, ಸುಬ್ರಮಣಿಯನ್ಗೆ ತಲಾ 2 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ. ಇನ್ನೊಬ್ಬ ಅಧಿಕಾರಿ ಅಂದು ಚೀ್ ರೆಗ್ಯುಲೇಟರಿ ಆಫೀಸರ್ ಆಗಿದ್ದ ವಿ.ಆರ್. ನರಸಿಂಹನ್ಗೆ 6 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. 45 ದಿನಗಳ ಒಳಗೆ ಈ ದಂಡವನ್ನು ಅವರು ಪಾವತಿಸಬೇಕಾಗಿದೆ.
ನೇಮಕ ಅಕ್ರಮ
ಆನಂದ ಸುಬ್ರಮಣಿಯನ್ ಎಂಬುವವರ ನೇಮಕದಲ್ಲಿ ಅಕ್ರಮ ನಡೆದಿತ್ತು. ಅವರಿಗೆ ವಾಷಿರ್ಕ 4 ಕೋಟಿ ರೂಪಾಯಿಗೂ ಹೆಚ್ಚು ವೇತನ ನೀಡಲಾಗಿದೆ. ಇದು ಇತರೆ ಹಿರಿಯರಿಗಿಂತ ಹೆಚ್ಚಿನ ವೇತನವಾಗಿತ್ತು.