

ಕ್ಯಾಲಿಫೋರ್ನಿಯ; ಸಮುದ್ರದ ದಂಡೆಯ ಬಳಿಯ ಮನೆಯ ಬಾಲ್ಕನಿಯೊಂದು ಕುಸಿದು ಬಿದ್ದ ಪರಿಣಾಮ ಇಬ್ಬರು ಗಾಯಗೊಂಡಿರುವ ಘಟನೆ ಬುಧವಾರ ಕ್ಯಾಲಿಫೋರ್ನಿಯಾದ ಮಾಲಿಬು ಪಟ್ಟಣದಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿದ ವಿಡಿಯೋ ಒಂದು ಜಾಲತಾಣಗಳಲ್ಲಿ ವೈರಲ್ ಆಗಿದೆ. ಸುಮಾರು 18 ಜನ ಬೀಚ್ ಬಳಿ ಇದ್ದ ಮನೆಯ ಬಾಲ್ಕನಿಯಲ್ಲಿ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಸುಮಾರು 15 ಅಡಿ ಮೇಲೆ ಇದ್ದ ಬಾಲ್ಕನಿ ಕುಸಿದು ಬಿದ್ದಿದೆ.
ಇದರ ಪರಿಣಾಮವಾಗಿ 15 ಜನವೂ ಬೀಚ್ ನಲ್ಲಿದ್ದ ಕಲ್ಲುಗಳ ಮೇಲೆ ಬಿದ್ದಿದ್ದಾರೆ. 16 ಜನಕ್ಕೆ ಸಣ್ಣಪುಟ್ಟ ಗಾಯಗಳಾಗಿದ್ದು 2 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.
ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ, ಕರೊನಾ ಇದ್ದರೂ ಜನಕ್ಕೆ ಗುಂಪುಗೂಡಿ ಪಾರ್ಟಿ ಮಾಡಲು ಅವಕಾಶ ಕೊಟ್ಟೊದ್ದೇಕೆ ಎಂದು ಪ್ರಶ್ನಿಸಿದ್ದಾರೆ.