ಕರಾಟೆಯಲ್ಲಿ ಬಾಲರಾಜ್, ರಯಾನ್ ಸಾಧನೆ

karate
ಕರಾಟೆಯಲ್ಲಿ ಸಾಧನೆ ಮಾಡಿದ ಮೊಹಮ್ಮದ್ ರಯಾನ್ ಹಾಗೂ ಬಾಲರಾಜ್ ಅವರನ್ನು ಶಿವಮೊಗ್ಗ ವಿನೋದ್, ದೇವರಾಜ್ ನಾಯ್ಕ ಸನ್ಮಾನಿಸಿದರು.
Published on

ಶಿವಮೊಗ್ಗ: ಮಲೇಶಿಯಾದ ಕೌಲಲಾಂಪುರದಲ್ಲಿ ನಡೆದ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಹತ್ತು ವರ್ಷ ವಯೋಮಿತಿಯ ಕಟಾ ವಿಭಾಗದಲ್ಲಿ ನಗರದ ಮೌಂಟ್ ಹೀರಾ ಪಬ್ಲಿಕ್ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಮೊಹಮ್ಮದ್ ರಯಾನ್ ತೃತೀಯ ಸ್ಥಾನ ಪಡೆದಿದ್ದಾನೆ ಎಂದು ರಾಜ್ಯ ಕರಾಟೆ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಶಿವಮೊಗ್ಗ ವಿನೋದ್ ತಿಳಿಸಿದರು.

ಈತ ಮಾಜಿ ಸೈನಿಕ ಅಬ್ದುಲ್ ರಜಾಕ್, ಮೇಜಬೀನಾ ದಂಪತಿಯ ಪುತ್ರ. ಈತ ವಿನೋಬನಗರ ತರಬೇತಿ ಕೇಂದ್ರದಲ್ಲಿ ಅಭ್ಯಾಸ ಮಾಡುತ್ತಿದ್ದ. ಹಲವು ಪಂದ್ಯಾವಳಿಗಳಲ್ಲಿ ಭಾಗವಹಿಸಿ ಪದಕ ಗಳಿಸಿದ್ದಾನೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

59 ವರ್ಷದ ವಿಭಾಗದಲ್ಲಿ ಶಿವಮೊಗ್ಗ ನಗರದ ಕರಾಟೆ ಮಾಸ್ಟರ್ ಬಾಲರಾಜ್ ಕಟಾಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನ ಹಾಗೂ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ. ನಮ್ಮ ಕೇಂದ್ರದಲ್ಲಿ ಹಲವಾರು ಕ್ರೀಡಾಪಟುಗಳು ತರಬೇತಿ ಪಡೆಯುತ್ತಿದ್ದು ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಪ್ರಮುಖರಾದ ದೇವರಾಜ್ ನಾಯ್ಕ, ಶರವಣ, ಶ್ರೀಹರ್ಷ, ರಾಮಚಂದ್ರ, ಬಾಲರಾಜ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net