

ಕೆ.ಆರ್.ಸಾಗರ: ಕೃಷ್ಣರಾಜಸಾಗರ ಅಣೆಕಟ್ಟೆಯಿಂದ ಸತತವಾಗಿ 45 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡುತ್ತಿರುವ ಹಿನ್ನೆಲೆಯಲ್ಲಿ ಬೆಳಗೊಳ ಸಮೀಪ ಇರುವ ಪ್ರಖ್ಯಾತ ಬಲಮುರಿಯಲ್ಲಿ ನದಿ ನೀರು ಅಪಾಯ ಮಟ್ಟದಲ್ಲಿ ಹರಿಯುತ್ತಿರುವುದರಿಂದ ಪ್ರವಾಸಿಗರು ಬರುವುದನ್ನು ಸಂಪೂರ್ಣ ಬಂದ್ ಮಾಡಲಾಗಿದೆ.
ಕೆ.ಆರ್.ಸಾಗರ ಅಣೆಕಟ್ಟೆಯಿಂದ ಹೊರ ಹರಿವು ಹೆಚ್ಚಿರುವ ಕಾರಣ ದೋಣಿ ವಿಹಾರ ಕೇಂದ್ರದ ಬಳಿ ಇಳಿಯದಂತೆ ದೊಡ್ಡ ಮರ ಅಡ್ಡಲಾಗಿ ಇಟ್ಟಿದ್ದು, ಈ ಬಲಮುರಿ ಫಾಲ್ಸ್ ಪ್ರವಾಸಿ ತಾಣಕ್ಕೆ ಕಳೆದ ಎರಡು ದಿನಗಳಿಂದ ಪ್ರವೇಶ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದ್ದು, ಪ್ರವಾಸಿಗರು ನಿರಾಸೆಯಿಂದ ತೆರಳುತ್ತಿರುವ ದೃಶ್ಯ ಕಂಡುಬಂತು.