ಬಲಮುರಿ ಶ್ರೀ ಮಹಾದೇವ ಸ್ಪೋರ್ಟ್ಸ್ ಕ್ಲಬ್ ವಾರ್ಷಿಕ ಮಹಾಸಭೆ

21.npk-1
ನಾಪೋಕ್ಲುವಿನ ಬಲಮುರಿ ಶ್ರೀ ಮಹಾದೇವ ಸ್ಪೋರ್ಟ್ಸ್ ಕ್ಲಬ್ನ 73ನೇ ವಾರ್ಷಿಕ ಮಹಾಸಭೆ ಕ್ಲಬ್ನ ಕಚೇರಿಯಲ್ಲಿ ಅಧ್ಯಕ್ಷ ತೊತ್ತಿಯಂಡ ಬನ್ಸಿ ಚಿಣ್ಣಪ್ಪ ಅಧ್ಯಕ್ಷತೆಯಲ್ಲಿ ಭಾನುವಾರ ನಡೆಯಿತು. ಸಂದೀಪ್ ನಂಜಪ್ಪ, ಬೊಳ್ಳಚಟ್ಟಿರ ಜಯಂತಿ, ಮೈನಾ ಕಾಳಪ್ಪ, ಚೆಯ್ಯಂಡ ಕಸ್ತೂರಿ ತಿಮ್ಮಯ್ಯ, ತೊತ್ತಿಯಂಡ ಸುಪ್ರೀತಾ ಇದ್ದರು.
Published on

ನಾಪೋಕ್ಲು: ಇಲ್ಲಿಗೆ ಸಮೀಪದ ಬಲಮುರಿ ಶ್ರೀ ಮಹಾದೇವ ಸ್ಪೋರ್ಟ್ಸ್ ಕ್ಲಬ್ನ 73ನೇ ವಾರ್ಷಿಕ ಮಹಾಸಭೆ ಕ್ಲಬ್ನ ಕಚೇರಿಯಲ್ಲಿ ಅಧ್ಯಕ್ಷ ತೊತ್ತಿಯಂಡ ಬನ್ಸಿ ಚಿಣ್ಣಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಕ್ಲಬ್ ವತಿಯಿಂದ ಆಯೋಜಿಸಿದ್ದ ಹಾಗೂ ಇತರೆಡೆ ನಡೆಸಿದ ಕಾರ್ಯಕ್ರಮಗಳು, ಕ್ರೀಡಾಕೂಟಗಳ ಬಗ್ಗೆ ಹಾಗೂ ಸಾಧಕ ಬಾಧಕಗಳ ಬಗ್ಗೆ ಕೂಲಂಕಷ ಚರ್ಚೆಗಳು ನಡೆದು ಅನುಮೋದನೆ ಪಡೆದುಕೊಂಡವು. ಮಹಾದೇವ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಇತರ ಕ್ರೀಡಾಕೂಟಗಳಲ್ಲಿ ಜಯಶೀಲರಾದ ತಂಡಗಳನ್ನು ಹಾಗೂ ವೈಯಕ್ತಿಕ ವಿಜೇತರನ್ನು ಅಭಿನಂದಿಸಲಾಯಿತು. ಬರುವ ನವೆಂಬರ್ ತಿಂಗಳಿನಲ್ಲಿ ಕ್ಲಬ್ ವತಿಯಿಂದ ಜಿಲ್ಲಾ ಮಟ್ಟದಲ್ಲಿ ಮಹಿಳೆಯರಿಗೆ ಥ್ರೋಬಾಲ್, ಪುರುಷರಿಗೆ ವಾಲಿಬಾಲ್ ಹಾಗೂ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಏರ್ಪಡಿಸಲು ತೀರ್ಮಾನಿಸಲಾಯಿತು. ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಚೈಯ್ಯಂಡ ರಘು ತಿಮ್ಮಯ್ಯ ಹಾಗೂ ಹಿರಿಯರಾದ ಬೊಳ್ಳಚೆಟ್ಟಿರ ಚೆಟ್ಟಿಚ್ಚ ಅವರು ಇದರ ಬಗ್ಗೆ ಸೂಕ್ತ ಮಾಹಿತಿ ಸಲಹೆ ಸೂಚನೆಯನ್ನು ನೀಡಿ ಮತ್ತೊಂದು ಸಭೆ ನಡೆಸಿ ಕ್ರೀಡಾಕೂಟ ನಡೆಸುವ ದಿನಾಂಕ ನಿಗದಿಪಡಿಸುವುದಾಗಿ ತಿಳಿಸಿದರು.

ಕ್ಲಬ್ ನಿಕಟಪೂರ್ವ ಅಧ್ಯಕ್ಷ ಬಿದ್ದಂಡ ಸಂದೀಪ್ ನಂಜಪ್ಪ, ಹಿರಿಯ ಕ್ರೀಡಾಪಟು ಬಾಕಿಲನ ವನಿತಾ ವಿಜಯ್, ಕಾರ್ಯದರ್ಶಿ ಬೊಳ್ಳಚಟ್ಟಿರ ಜಯಂತಿ, ಬೊಳ್ಳಚಟ್ಟಿರ ಮೈನಾ ಕಾಳಪ್ಪ, ಚೆಯ್ಯಂಡ ಕಸ್ತೂರಿ ತಿಮ್ಮಯ್ಯ, ತೊತ್ತಿಯಂಡ ಸುಪ್ರೀತಾ, ಆಂಗೀರ ಸಂತೋಷ್ ಮೇಡತನ ಶಾಂತಿ, ಸೇರಿದಂತೆ ಕ್ಲಬ್‌ನ ಪದಾಧಿಕಾರಿಗಳು, ಕ್ರೀಡಾ ಅಭಿಮಾನಿಗಳು ಭಾಗವಹಿಸಿದ್ದರು. ಮೇಡತನ ರಶ್ಮಿ ಶಿವರಾಂ ಪ್ರಾರ್ಥಿಸಿ, ಉಪಾಧ್ಯಕ್ಷರಾದ ಗುಡ್ಡೇರ ಲಕ್ಷು ಸೋಮಣ್ಣ ಸ್ವಾಗತಿಸಿ, ಸಹ ಕಾರ್ಯದರ್ಶಿ ಬೊಳ್ಳಚಟ್ಟಿರ ಅಚ್ಚಪ್ಪ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net